ಚಿಕ್ಕನಗನೂರಿನಲ್ಲಿ ಸೌಲಭ್ಯ ಕಲ್ಪಿಸಿ

Untitled design
Published on

ಹಟ್ಟಿಚಿನ್ನದಗಣಿ: ಗೆಜ್ಜಲಗಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕನಗನೂರು ಗ್ರಾಮಕ್ಕೆ ಮೂಲ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಜಯ ಕರ್ನಾಟಕ ಸೇನೆಯ ಪದಾಧಿಕಾರಿಗಳು ಗೆಜ್ಜಲಗಟ್ಟಾ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಬುಧವಾರ ಮನವಿ ಸಲ್ಲಿಸಿದರು.

ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಮಳೆ ನೀರು ನಿಂತಿರುವುದರಿಂದ ಗುಂಡಿಗಳು ಕಾಣದೆ ಹಲವರು ಕೈಕಾಲು ಮುರಿದುಕೊಂಡಿದ್ದಾರೆ. ಚರಂಡಿ ತುಂಬಿ ಹರಿಯುತ್ತಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ. ಗ್ರಾಮದಲ್ಲಿ ಬೀದಿ ದೀಪಗಳಿಲ್ಲದೆ ಕಗ್ಗತ್ತಲು ಆವರಿಸಿದೆ. ಇದರಿಂದ ಜನತೆ ಜೀವಭಯದಲ್ಲಿ ತಿರುಗಾಡುವಂತಾಗಿದೆ. ಶೌಚಗೃಹ ಇಲ್ಲದೇ ಬಹಿರ್ದಸೆಗೆ ಹೋಗುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net