ಹಟ್ಟಿಯಿಂದ ಲಿಂಗಸುಗೂರಿಗೆ ಪ್ರಯಾಣ ಪ್ರಯಾಸದಾಯಕ

5 HATTI 1
Published on

ಹಟ್ಟಿಚಿನ್ನದಗಣಿ: ಹಟ್ಟಿಯಿಂದ ಲಿಂಗಸುಗೂರಿಗೆ ತೆರಳುವ ವಿದ್ಯಾರ್ಥಿಗಳು, ನೌಕರಸ್ಥರು ಬೆಳಗ್ಗೆ 7ರಿಂದ 9ರವರೆಗೆ ಬಸ್ ಸೌಕರ್ಯವಿಲ್ಲದೆ ಪರದಾಡುವಂತಾಗಿದೆ.

ಬೆಳಗ್ಗೆ 7ಕ್ಕೆ ಹೊರಡುವ ಹುಬ್ಬಳ್ಳಿ ಮತ್ತು ಧರ್ಮಸ್ಥಳ ಬಸ್‌ನಲ್ಲಿ ನಿಂತುಕೊಳ್ಳಲು ಕೂಡ ಸ್ಥಳವಿರುವುದಿಲ್ಲ. ಹಟ್ಟಿ-ಲಿಂಗಸುಗೂರು ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಹಳೆಯದಾಗಿವುದರಿಂದ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿರುವುದರಿಂದ ಪ್ರಯಾಣಿಕರು ರೋಸಿ ಹೋಗಿದ್ದಾರೆ.

ಬಸ್ ಸಮಸ್ಯೆ ಇತ್ಯರ್ಥಪಡಿಸಲು ಪಟ್ಟಣದ ನೂರಾರು ವಿದ್ಯಾರ್ಥಿಗಳು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದರೂ ಪ್ರಯೋಜನವಾಗಿಲ್ಲ. ಬಸ್ ನಿಲ್ದಾಣದಲ್ಲಿ ಸಿಬ್ಬಂದಿ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ. ಲಿಂಗಸುಗೂರು ಡಿಪೋ ವ್ಯವಸ್ಥಾಪಕ ಫೋನ್ ಕರೆ ಸ್ವೀಕರಿಸುವುದಿಲ್ಲ ಎಂಬುದು ವಿದ್ಯಾರ್ಥಿಗಳ ಆರೋಪವಾಗಿದೆ. ಹಟ್ಟಿಯಿಂದ ಲಿಂಗಸುಗೂರಿಗೆ ಹೆಚ್ಚುವರಿ ಬಸ್‌ಗಳ ಸಂಚಾರ ಆರಂಭಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net