ಹಟ್ಟಿ ತಿಪ್ಪೇಶನ ಜಾತ್ರೆಗೆ ಭರದ ಸಿದ್ದತೆ

CTD 27 NAYAKANAHATTI -08
Published on

ಚಿತ್ರದುರ್ಗ: ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರ ಸ್ವಾಮಿ ಜಾತ್ರೆ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ಮೂಲ ಸೌಕರ್ಯಕ್ಕೆ ಕೊರತೆ ಯಾಗದಂತೆ ಅಗತ್ಯ ಕ್ರಮ ವಹಿಸ ಬೇಕೆಂದು ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಎಸಿ ಕಚೇರಿಯಲ್ಲಿ ಸೋಮವಾರ ನಾಯಕನಹಟ್ಟಿ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಜಾತ್ರೆ ಸಿದ್ಧತೆಯ ಪ್ರಗತಿ ಪರಿಶೀಲಿಸಿ ಮಾತನಾಡಿ, ಮಾರ್ಚ್ 3ರಿಂದ 13ರವರೆಗೆ ಜಾತ್ರೆ ನಡೆಯಲಿದ್ದು,10 ರಂದು ಜರುಗುವ ದೊಡ್ಡ ರಥೋತ್ಸವಕ್ಕೆ ಆಂಧ್ರ ಪ್ರದೇಶ,ತೆಲಂಗಾಣ ಸೇರಿ ರಾಜ್ಯದ ವಿವಿಧಡೆಗಳಿಂದ 4 ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸಲಿದ್ದಾರೆ ಎಂದರು.

ಕುಡಿಯುವ ನೀರು,ಆರೋಗ್ಯ,ನೈರ್ಮಲ್ಯ,ಸಮರ್ಪಕ ವಿದ್ಯುತ್ ವ್ಯವಸ್ಥೆ,ಬಂದೋಬಸ್ತ್, ಸಾರಿಗೆ ಸೇರಿ ಅಗತ್ಯ ಮೂಲ ಸೌಲಭ್ಯ ಗ ಳನ್ನು ಅಚ್ಚುಕಟ್ಟಾಗಿ ಒದಗಿಸ ಬೇಕು. ಭಕ್ತರಿಗೆ ತೊಂದರೆ,ಕಿರುಕುಳವಾಗಬಾರದು. ಸಂತೋಷದಿಂದ ಜಾತ್ರೆಯಲ್ಲಿ ಭಾಗವಹಿಸುವಂತಾಗ ಬೇಕೆಂದರು.

ನೀರು ಸರಬರಾಜಿಗಾಗಿ 40 ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. 6 ಕಡೆ ಬೋರ್‌ವೆಲ್‌ಗಳನ್ನು ಗುರುತಿಸಲಾಗಿದೆ ಎಂದು ಪಪಂ ಮು ಖ್ಯಾಧಿಕಾರಿ ಲೀಲಾವತಿ ತಿಳಿಸಿದರು. ಬೋರ್‌ವೆಲ್‌ಗಳ ನೀರು ಕುಡಿಯಲು ಯೋಗ್ಯವಿದೆಯೇ ಎಂದು ಪರಿಶೀಲಿಸುವಂತೆ ಆರೋಗ್ಯ ಅಧಿಕಾರಿಗಳಿಗೆ ಎಡಿಸಿ ತಿಳಿಸಿದರು. ಪಟ್ಟಣದ 5 ಕಡೆ ತಾತ್ಕಾಲಿಕವಾಗಿ ಸಾರ್ವಜನಿಕ ಶೌಚಗೃಹಗಳನ್ನು ನಿರ್ಮಿಸಬೇ ಕು. ಜಾತ್ರೆ ದಿನಗಳಂ ದು ಶಾಲಾ ಕಾಲೇಜುಗಳು,ಸರ್ಕಾರಿ ಕಚೇರಿಗಳ ಶೌಚಗೃಹಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತವಾಗಿರಿಸ ಬೇಕೆಂದರು.

16 ಜನರ ವೈದ್ಯಾಧಿಕಾರಿಗಳು ಹಾಗೂ 152 ಸಿಬ್ಬಂದಿ ನಿಯೋಜಿಸಲಾಗುವುದು. 4 ಕಡೆ ತಾತ್ಕಾಲಿಕ ಕ್ಲಿನಿಕ್‌ಗಳಿರುತ್ತವೆ. ಆಹಾರ ಹಾಗೂ ನೈರ್ಮಲ್ಯ ಮೇಲ್ವಿಚಾರಣೆಗಾಗಿ 8 ತಂಡಗಳು,ತುರ್ತು ಸೇವೆಗಳಿಗಾಗಿ 4 ಆಂಬ್ಯುಲೆನ್ಸ್,ಕೋವಿಡ್ ಲಸಿಕಾ ಕೇಂದ್ರ ತೆರೆಯ ಲಾಗುವುದೆಂದು ಡಿಎಚ್‌ಒ ಡಾ.ಆರ್.ರಂಗನಾಥ್ ಹೇಳಿದರು.

ಸಿಸಿ ಟಿವಿ ಕಣ್ಗಾವಲು

ಬಂದೋಬಸ್ತ್‌ಗೆ 2550 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು. ಅಹಿತಕರ ಘಟನೆ,ಕಳ್ಳತನವನ್ನು ನಿಯಂತ್ರಿಸಲು 30 ಕಡೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗು ತ್ತಿದೆ. 3 ಕಡೆ ವಾಚ್ ಟವರ್,22 ಕಡೆ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗುವುದೆಂದು ಪೊ ಲೀಸ್ ಅಧಿಕಾರಿಗಳು ತಿಳಿಸಿದರು.

ನಾಯಕನಹಟ್ಟಿ ಸಂಪರ್ಕಿಸುವ ಏಳು ಕಡೆಗಳಲ್ಲಿ ಚೆಕ್‌ಪೋಸ್ಟ್ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರ ಅ ನುಕೂಲಕ್ಕಾಗಿ ಆಟೋಗಳು ಸಂಚರಿಸಿವೆ.  ಗ್ರಾಹಕರಿಗೆ ಹೊರೆಯಾಗದಂತೆ ದರ ನಿಗದಿಪಡಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ ಎಡಿಸಿ,ಪ್ರಾಣಿಬಲಿ ನಿಷೇಧಿಸಲಾಗಿದೆ ಎಂದರು.

ಪಟ್ಟಣದ 3ಕಿ.ಮೀ.ವ್ಯಾಪ್ತಿ ಮದ್ಯ ಮಾರಾಟ ನಿಷೇಧಿಸಲಾಗುವುದು ಎಂದರು. ಎಸಿ ಆ ರ್.ಚಂದ್ರಯ್ಯ,ಚಳ್ಳಕೆರೆ ತಹಸೀಲ್ದಾರ್ ರೆಹಮಾನ್‌ಪಾಶ,ದೇವಸ್ಥಾನದ ಆಡಳಿತಾಧಿಕಾರಿ ಗಂಗಾಧರಪ್ಪ ಇತರರು ಇದ್ದರು.

*ಮುಕ್ತಿಬಾವುಟ ಪಡೆಯಲು ನೋಂದಣಿ

ದೊಡ್ಡ ರಥೋತ್ಸವ ಮುನ್ನ ಜರಗುವ ಮುಕ್ತಿ ಬಾವುಟ ಹರಾಜಿನಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿಕೊಳ್ಳಬೇಕು.ನೋಂದಣಿ ಸ ಮಯದಲ್ಲಿ ಚೆಕ್ ಪಡೆಯಬೇಕು. ಹರಾಜಿನಲ್ಲಿ ಮುಕ್ತಿ ಬಾವುಟ ಪಡೆದವರು 3 ತಿಂಗಳ ಒಳಗೆ ಹಣ ಸಂದಾಯ ಮಾಡುವಂತೆ ನಿಯ ಮ ರೂಪಿಸುವ ಕುರಿತು ಚರ್ಚಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net