ಹಟ್ಟಿ ಪಪಂ ಹಂಚಿಕೊಂಡ ಕಾಂಗ್ರೆಸ್, ಜೆಡಿಎಸ್; ಶಾಸಕ ಡಿ.ಎಸ್.ಹೂಲಗೇರಿಗೆ ಮುಖಭಂಗ

Hutti Panchayat President Vijayamma Vice President Nagaratna
ಹಟ್ಟಿ ಪಪಂ ನೂತನ ಅಧ್ಯಕ್ಷೆ ವಿಜಯಮ್ಮ ನಾಗರೆಡ್ಡಿ, ಉಪಾಧ್ಯಕ್ಷೆ ನಾಗರತ್ನಾ ಶರಣಗೌಡ ಗುರಿಕಾರ.
Published on

ಹಟ್ಟಿಚಿನ್ನದಗಣಿ: ಹಟ್ಟಿ ಪಟ್ಟಣ ಪಂಚಾಯಿತಿಗೆ ಕಾಂಗ್ರೆಸಿನ ವಿಜಯಮ್ಮ ನಾಗರೆಡ್ಡಿ ಜೇರಬಂಡಿ ಅಧ್ಯಕ್ಷರಾಗಿ ಹಾಗೂ ಜೆಡಿಎಸ್‌ನ ನಾಗರತ್ನ್ನಾ ಶರಣಗೌಡ ಗುರಿಕಾರ್ ಉಪಾಧ್ಯಕ್ಷರಾಗಿ ಸೋಮವಾರ ಅವಿರೋಧ ಆಯ್ಕೆಯಾದರು. ಚುನಾವಣಾಧಿಕಾರಿಯು ಆದ ತಹಸೀಲ್ದಾರ್ ಚಾಮರಾಜ ಪಾಟೀಲ್ ಇವರ ಆಯ್ಕೆಯನ್ನು ಘೋಷಿಸಿದರು.

ಪಪಂ ಪ್ರಥಮ ಅಧ್ಯಕ್ಷ ಸ್ಥಾನಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ರೆಡ್ಡಿ ಸಮುದಾಯದ ವಿಜಯಮ್ಮರ ಪರ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಹಾಗೂ ಉಪ್ಪಾರ ಸಮುದಾಯದ ಪಾರ್ವತಮ್ಮರ ಪರ ಲಿಂಗಸುಗೂರು ಶಾಸಕ ಡಿ.ಎಸ್.ಹೂಲಗೇರಿ ಶತ ಪ್ರಯತ್ನ ನಡೆಸಿದ್ದರು. ಆದರೆ, ಬಯ್ಯಪುರ ಕೈಮೇಲಾಗಿದ್ದು, ಶಾಸಕ ಹೂಲಗೇರಿಗೆ ಮುಖಭಂಗವಾಗಿದೆ.

ನಾಲ್ವರು ಕಾಂಗ್ರೆಸ್ ಹಾಗೂ ಒಬ್ಬ ಪಕ್ಷೇತರ ಸೇರಿ ಐವರು ಪಾರ್ವತಮ್ಮರ ಪರ, ಒಬ್ಬ ಪಕ್ಷೇತರ, ಮೂವರು ಜೆಡಿಎಸ್ ಹಾಗೂ ನಾಲ್ವರು ಕಾಂಗ್ರೆಸ್ ಸೇರಿ ಒಟ್ಟು ಎಂಟು ಸದಸ್ಯರು ವಿಜಯಮ್ಮರ ಪರವಾಗಿದ್ದರು. ಕೊನೆ ಹಂತದಲ್ಲಿ ಅಧಿಕಾರ-ಹಣ ಬಲದಲ್ಲಿ ಕಾಂಗ್ರೆಸ್ ಎಂಟು ಸ್ಥಾನ ಹೊಂದಿ ಪೂರ್ಣ ಬಹುಮತ ಹೊಂದಿದ್ದರೂ ಕೇವಲ 3 ಸದಸ್ಯ ಬಲದ ಜೆಡಿಎಸ್‌ಗೆ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನ ನೀಡಿ ಕೈಕಟ್ಟಿ ಕುಳಿತಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net