ಹಟ್ಟಿಯಲ್ಲಿ ಇಂದಿರಾ ಕ್ಯಾಂಟಿನ್ ಶೀಘ್ರ

HATTI TOWN PANCHAYATH
Published on

ಹಟ್ಟಿಚಿನ್ನದಗಣಿ: ಹಟ್ಟಿ ಪಪಂ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟಿನ್ ಆರಂಭಕ್ಕೆ ರಾಜ್ಯ ಸರ್ಕಾರ ಅಸ್ತು ಎಂದಿದ್ದು, ಜಂಟಿ ನಿರ್ದೇಶಕರು (ಯೋಜನೆ) ಹಾಗೂ ನಗರಾಭಿವೃದ್ಧಿ ಇಲಾಖೆಯ ಪದನಿಮಿತ್ತ ಕಾರ್ಯದರ್ಶಿ ನರಸಿಂಹ ಎಂ.ಆರ್ ಶುಕ್ರವಾರ ಈ ಕುರಿತು ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಹೊಸದಾಗಿ ಇಂದಿರಾ ಕ್ಯಾಂಟಿನ್ ಆರಂಭಿಸಲು ಜಿಲ್ಲಾಧಿಕಾರಿ ಅ.8ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಹಟ್ಟಿಚಿನ್ನದಗಣಿ ಪ್ರದೇಶದಲ್ಲಿ ಇಂದಿರಾ ಕ್ಯಾಂಟಿನ್ ಆರಂಭಿಸಲು ಕುರಿತು ನಿಯಮಾನುಸಾರ ಕ್ರಮವಹಿಸುವಂತೆ 2023ರ ಸೆ.25ರಂದು ಪೌರಾಡಳಿತ ನಿರ್ದೆಶನಾಲಯದ ಯೋಜನಾಧಿಕಾರಿ ಜಿಲ್ಲಾ ನಗರಾಭಿವೃದ್ಧಿ ಕೋಶಕ್ಕೆ ಪತ್ರ ಬರೆದು ಸೂಚಿಸಿದ್ದರು.

ಜಿಲ್ಲೆಯಲ್ಲಿ 14 ನೂತನ ಇಂದಿರಾ ಕ್ಯಾಂಟಿನ್ ಆರಂಭಕ್ಕೆ ಜಿಲ್ಲಾಧಿಕಾರಿ ಕಚೇರಿಯಿಂದ ಸಲ್ಲಿಕೆಯಾದ ಪ್ರಸ್ತಾವನೆ ಪೈಕಿ 5 ಕಡೆ ಆರಂಭಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಹಟ್ಟಿ ಪಪಂ ವ್ಯಾಪ್ತಿಯ 3ನೇ ವಾರ್ಡ್‌ನ ಸಂತೆ ಬಜಾರ್ ಹತ್ತಿರ ಇಂದಿರಾ ಕ್ಯಾಂಟಿನ್ ಆರಂಭಿಸಲು ಸಮ್ಮತಿ ನೀಡಲಾಗಿದೆ. ‘ಇಂದಿರಾ ಕ್ಯಾಂಟೀನ್ ಆರಂಭ ಯಾವಾಗ’ ಶೀರ್ಷಿಕೆಯಡಿ ಕಳೆದ ನ.30ರಂದು ವಿಜಯವಾಣಿಯಲ್ಲಿ ವರದಿ ಪ್ರಕಟಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net