ಪುಸ್ತಕ ವಿತರಿಸುವಂತೆ ಎಸ್‌ಎಫ್‌ಐ ಒತ್ತಾಯ;ಹಟ್ಟಿ ಪಪಂ ಕಚೇರಿ ಎದುರು ಪ್ರತಿಭಟನೆ

11052022 Hutti sfi protest
Published on

ಅನಿರ್ದಿಷ್ಟಾವಧಿ ಧರಣಿ ಹೋರಾಟದ ಎಚ್ಚರಿಕೆ

ಹಟ್ಟಿಚಿನ್ನದಗಣಿ: ಪ.ಜಾತಿ ಮತ್ತು ಪ.ಪಂಗಡ ವಿದ್ಯಾರ್ಥಿಗಳಿಗೆ ಶೇ.25ರ ಅನುದಾನದಲ್ಲಿ ಪಠ್ಯಪುಸ್ತಕ ವಿತರಿಸುವಂತೆ ಆಗ್ರಹಿಸಿ ಎಸ್‌ಎಫ್‌ಐ ಕಾರ್ಯಕರ್ತರು ಪಪಂ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಮೂರ‌್ನಾಲ್ಕು ತಿಂಗಳಿಂದ ಅಲೆದಾಡಿದರೂ ಪುಸ್ತಕ ವಿತರಿಸಲು ಕ್ರಮಕೈಗೊಂಡಿಲ್ಲ. ಹಲವು ಬಾರಿ ಮುಖ್ಯಾಧಿಕಾರಿ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೆ ಪುಸ್ತಕ ಅಂಗಡಿಗಳಿಗೆ ನೀಡಬೇಕಾದ ಬಾಕಿ ಪಾವತಿಸಿ, ಅಗತ್ಯ ಪಾಠೋಪಕರಣಗಳನ್ನು ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಶೀಘ್ರ ಸ್ಪಂದಿಸದಿದ್ದರೆ ಅನಿರ್ದಿಷ್ಟಾವಧಿ ಧರಣಿ ನಡೆಸುವದಾಗಿ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net