

ಹಟ್ಟಿ ಚಿನ್ನದ ಗಣಿ: ಎತ್ತು ಕಳವು ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿರೂಪಾಕ್ಷ ಎಂಬಾತನಿಗೆ ಸಾರ್ವಜನಿಕರಿಂದ ಮಂಗಳವಾರ ರಾತ್ರಿ ಧರ್ಮದೇಟು ತಿಂದಿದ್ದು, ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.
ಮಾನ್ವಿ ತಾಲೂಕಿನ ಮರಕಂದಿನ್ನಿ ಗ್ರಾಮದ ವಿರೂಪಾಕ್ಷ ಮುದುಕಪ್ಪ ಎಂಬಾತ ಕಸನದೊಡ್ಡಿ ಬಳಿಯ ಸದಕಲಗುಡ್ಡದ ಬಳಿ ಮಾರಾಟಕ್ಕೆ ಯತ್ನಿಸಿದ್ದಾನೆ. ಅನುಮಾನ ವ್ಯಕ್ತಪಡಿಸಿದ ಗ್ರಾಮಸ್ಥರು ಮಾರಾಟಕ್ಕೆ ತಂದಿದ್ದ ಎತ್ತುಗಳನ್ನು ಕಳವು ಮಾಡಿದ್ದರ ಕುರಿತು ಪತ್ತೆಹೆಚ್ಚಿ, ಮಲ್ಲಾಪುರ ಕ್ಯಾಂಪಿನ ಶಿವಲಿಂಗಪ್ಪ ಎಂಬುವವರನ್ನು ಕರೆಸಿ ವಿಚಾರಿಸಿದಾಗ ಕಳವು ಮಾಡಿರುವುದು ಖಚಿತಪಡಿಸಿಕೊಂಡಿದ್ದಾರೆ. ಬಳಿಕ ಹಿಗ್ಗಾ-ಮುಗ್ಗಾ ಥಳಿಸಿ ಹಟ್ಟಿ ಠಾಣೆಗೆ ಒಪ್ಪಿಸಿದ್ದಾರೆ.