ಹಟ್ಟಿ ಚಿನ್ನದ ಗಣಿಗೆ 440 ಕೋಟಿ ರೂ. ಲಾಭ

Published on

ಲಿಂಗಸುಗೂರು: ಹಟ್ಟಿ ಚಿನ್ನದ ಗಣಿ ದೇಶದಲ್ಲೇ ಅತಿ ಹೆಚ್ಚು ಬಂಗಾರ ಉತ್ಪಾದಿಸುವ ಕಂಪನಿಯಾಗಿದ್ದು, ಪ್ರಸಕ್ತ ವರ್ಷ 440 ಕೋಟಿ ರೂ. ಲಾಭ ಗಳಿಸಿದೆ ಎಂದು ಹಟ್ಟಿ ಚಿನ್ನದ ಗಣಿ ಕಂಪನಿ ಅಧ್ಯಕ್ಷ ಜೆ.ಟಿ.ಪಾಟೀಲ್ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ 1000 ಮನೆ ನಿರ್ಮಾಣ, ಕುಡಿವ ನೀರಿನ ಯೋಜನೆಗೆ 135 ಕೋಟಿ ರೂ., 120 ಕೋಟಿ ರೂ. ವೆಚ್ಚದಲ್ಲಿ ಸೋಲಾರ್ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಚಿನ್ನದ ಗಣಿ ನೌಕರರಿಗೆ ಬಹುದೊಡ್ಡ ಅನುಕೂಲ ಮಾಡಿಕೊಡಲಾಗಿದೆ.

ಕೆಲಸದ ಸಂದರ್ಭದಲ್ಲಿ ಕಾರ್ಮಿಕ ಮೃತಪಟ್ಟರೆ ಅವರ ಕುಟುಂಬಕ್ಕೆ ಒಂದು ಕೋಟಿ ರೂ. ವಿಮೆ ಸಿಗುವಂತೆ ಮಾಡಲಾಗಿದೆ. ವೇತನ ಕೂಡ ಹೆಚ್ಚಳ ಮಾಡಲಾಗಿದೆ. ಚಿನ್ನದ ಗಣಿಯಲ್ಲಿ 4000 ಜನರು ದುಡಿಯುತ್ತಿದ್ದಾರೆ. ಕಳೆದ ವರ್ಷ 239 ಕೋಟಿ ರೂ. ಕಂಪನಿಗೆ ಲಾಭವಾಗಿತ್ತು. ಮುಂದಿನ ವರ್ಷ ಹೆಚ್ಚು ಲಾಭ ನಿರೀಕ್ಷಿಸಲಾಗಿದೆ. ಅಲ್ಲದೆ ಹಟ್ಟಿ ಪಟ್ಟಣ ಅಭಿವೃದ್ಧಿಗೆ 2.50 ಕೋಟಿ ರೂ. ನೀಡಲು ತೀರ್ಮಾನಿಸಲಾಗಿದೆ ಎಂದು ಜೆ.ಟಿ.ಪಾಟೀಲ್ ಹೇಳಿದರು.

13-ಎಲ್‌ಎನ್‌ಜಿ-02

ಜೆ.ಟಿ.ಪಾಟೀಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net