ತರಾತುರಿಯಲ್ಲಿ ಹಿಂದಿರುಗಿದ ಅಧಿಕಾರಿಗಳು

20082022 hutti protest
Published on

ಹಟ್ಟಿಚಿನ್ನದಗಣಿ: ಮೇದಿನಾಪುರದಲ್ಲಿ ತಹಸೀಲ್ದಾರ್ ಬಲರಾಮ್ ಕಟ್ಟಿಮನಿ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ 12ಕ್ಕೆ ಆರಂಭವಾದ ಕಾರ್ಯಕ್ರಮ ಕೆಲವೇ ಹೊತ್ತಿನಲ್ಲಿ ಮುಗಿಯಿತು. ಭಾಷಣ ಮುಗಿಸಿ, ಅಹವಾಲು ಸ್ವೀಕರಿಸುತ್ತಿದ್ದಂತೆಯೇ ತಹಸೀಲ್ದಾರ್, ಲಿಂಗಸುಗೂರಿನಲ್ಲಿ ತುರ್ತು ಕೆಲಸವಿದೆ ಎಂದು ಹೊರಡುತ್ತಿದ್ದಂತೆ ಲಿಂಗಸುಗೂರು ಡಿಪೋ ವ್ಯವಸ್ಥಾಪಕ, ಸಾರಿಗೆ ನಿಯಂತ್ರಣಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿ ಒಬ್ಬರಾದ ಮೇಲೊಬ್ಬರು ಪೇರಿ ಕಿತ್ತಿದರು.

ಸ್ಥಳದಲ್ಲಿದ್ದ ಉಪ ತಹಸೀಲ್ದಾರ್ ರಂಗಪ್ಪನಾಯಕ್ ದೊರೆ, ತಾಪಂ ಇಒ ಅಮರೇಶ್ ಯಾದವ್, ಪಿಎಸ್‌ಐ ರಾಮಲಿಂಗಪ್ಪ, ಸಿಡಿಪಿಒ ಶರಣಮ್ಮ ಕಾರನೂರು, ಕಂದಾಯ ನಿರೀಕ್ಷಕ ರಾಘವೇಂದ್ರ, ಗ್ರಾಮ ಲೆಕ್ಕಾಧಿಕಾರಿ ಯೇಸಪ್ಪ, ಪಿಡಿಒ ಗಜದಂಡಸ್ವಾಮಿ, ಗ್ರಾಪಂ ಅಧ್ಯಕ್ಷ ಅಮರೇಗೌಡ ಪೊಲೀಸ್ ಪಾಟೀಲ್ ಹಾಗೂ ಅಧಿಕಾರಿಗಳು ಅಹವಾಲು ಸ್ವೀಕರಿಸಿದರು. ಕೆಲವು ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net