

ಹಟ್ಟಿಚಿನ್ನದಗಣಿ: ಲಾಕ್‌ಡೌನ್ ಜಾರಿ ಇದ್ದರೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಸಿ ರಸ್ತೆ ಕಾಮಗಾರಿ ನಡೆಸುತ್ತಿದ್ದ ಮೇಸ್ತ್ರಿಯನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದರು.
ಪಪಂ ಅನುದಾನದಲ್ಲಿ 2ಲಕ್ಷ ರೂ. ವೆಚ್ಚದಲ್ಲಿ ಕೋಠಾ ರಸ್ತೆಯಿಂದ ಸಂತೆ ಬಜಾರ ಸಂಪರ್ಕಿಸುವ ವರೆಗೆ ಕಾಮಗಾರಿ ನಡೆಸಲಾಗುತ್ತಿತ್ತು. ಸಾರ್ವಜನಿಕರ ದೂರಿನ ಮೇರೆಗೆ ಪಟ್ಟಣ ಠಾಣೆ ಪಿಎಸ್‌ಐ ಮುದ್ದುರಂಗ ಸ್ವಾಮಿ ಸ್ಥಳಕ್ಕೆ ಭೇಟಿ ಒಬ್ಬರನ್ನು ವಶಕ್ಕೆ ಪಡೆದರು.
ಪಪಂ ಅನುದಾನದಲ್ಲಿ ರಸ್ತೆ ಕಾಮಗಾರಿ ನಡೆಸಲಾಗಿದೆ. ಮುಖ್ಯಾಧಿಕಾರಿ ಜಿಲ್ಲಾಡಳಿತದ ಆದೇಶಕ್ಕೆ ಕಿಮತ್ತು ನೀಡಿಲ್ಲ. ಇವರ ವಿರುದ್ಧ ಮೇಲಧಿಕಾರಿಗಳು ಕ್ರಮವಹಿಸುವಂತೆ ಒತ್ತಾಯಿಸಿದ್ದಾರೆ.
ಕಾಮಗಾರಿ ಪ.ಪಂ. ಅನುದಾನದಲ್ಲೆ ನಡೆಯುತ್ತಿದೆ. ರಸ್ತೆ ನಿರ್ಮಾಣ ನಡೆಸಿರುವವರನ್ನು ಪೊಲೀಸರು ಬಂಧಿಸಿದ್ದಾರೆ. ಕಾಮಗಾರಿ ನಡೆಸದಂತೆ ತಿಳಿಸಿದ್ದರೂ ಕೆಲಸಕ್ಕೆ ಮುಂದಾಗಿದ್ದಾರೆ.| ಪ್ರವೀಣಕುಮಾರ, ಮುಖ್ಯಾಧಿಕಾರಿ ಹಟ್ಟಿ ಪ.ಪಂ