ಜ್ಯೋತಿರ್ಲಿಂಗಗಳ ಶಾಂತಿಯಾತ್ರೆ

26 HUTTI 01
ಹಟ್ಟಿ ಚಿನ್ನದಗಣಿಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಜ್ಯೋತಿರ್ಲಿಂಗಗಳ ಶಾಂತಿಯಾತ್ರೆ ಮೆರವಣಿಗೆ ನಡೆಯಿತು. ಸೇವಾ ಕೇಂದ್ರದ ಸಂಚಾಲಕಿ ಬಿ.ಕೆ.ಇಂದಿರಾ, ರಾಜೇಶ್ವರಿ ಬುದ್ದಿನ್ನಿ, ನಾಗರತ್ನಾ ಗುರಿಕಾರ, ಶಾಂತಾ, ಗೌರಿ ರಾಘವೇಂದ್ರ ಇತರರಿದ್ದರು.
Published on

ಹಟ್ಟಿ ಚಿನ್ನದಗಣಿ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಮಹಾಶಿವರಾತ್ರಿ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ 12 ಜ್ಯೋತಿರ್ಲಿಂಗಗಳ ಶಾಂತಿಯಾತ್ರೆ ಬುಧವಾರ ನಡೆಯಿತು.

ಪಟ್ಟಣದ ಸಂತೆ ಬಜಾರಿನಲ್ಲಿರುವ ಈಶ್ವರೀಯ ವಿಶ್ವವಿದ್ಯಾಲಯದಿಂದ ಪ್ರಾರಂಭವಾದ ಶಾಂತಿಯಾತ್ರೆ ಹಳೇ ಬಸ್ ನಿಲ್ದಾಣದ ಮೂಲಕ ಪ್ರಾರಂಭವಾಗಿ, ಸಿದ್ಧಾರೂಢ ಮಠ, ಸರ್ಕಾರಿ ಕಾಲೇಜು, ಗಾಂಧಿಮೈದಾನ, ಲಿಂಗಾವಧೂತರ ದೇವಸ್ಥಾನ ತಲುಪಿ ಅದೇ ಮಾರ್ಗವಾಗಿ ಪುನಃ ಆಶ್ರಮದಲ್ಲಿ ಮುಕ್ತಾಯಗೊಂಡಿತು.

ಭಕ್ತರಾದ ಮಲ್ಲಿಕಾರ್ಜುನ ಬುದ್ದಿನ್ನಿ, ಪ್ರಭುಗೌಡ ನಿಲೋಗಲ್, ವೆಂಕಟೇಶ ಪೂಜಾರಿ, ಮಹಾರುದ್ರಯ್ಯ ಕೊಠಾ, ಸತೀಶ್, ಈರೇಶ ಗುಡಿಹಾಳ, ವಿಜಯಕುಮಾರ, ಮಲ್ಲಿಕಾರ್ಜುನ ಕೊಠಾ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net