ಕಾಯಂ ವೈದ್ಯರಿಗೆ ಒತ್ತಾಯಿಸಿ ಧರಣಿ

23112020 Hutti Gold Mine protest
Published on

ಹಟ್ಟಿಚಿನ್ನದಗಣಿ: ಗುರುಗುಂಟಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ಎಂಬಿಬಿಎಸ್ ವೈದ್ಯರ ನೇಮಕ ಮತ್ತು ಖಾಲಿ ಇರುವ ಹುದ್ದೆಗಳ ಭರ್ತಿಗೆ ಒತ್ತಾಯಿಸಿ ಕನ್ನಡ ಸೇನೆ ಕರ್ನಾಟಕ ತಾಲೂಕು ಆಸ್ಪತ್ರೆ ಎದುರು ಸೋಮವಾರ ಒಂದು ದಿನದ ಸಾಂಕೇತಿಕ ಧರಣಿ ನಡೆಸಿತು.

ಸಂಘಟನೆ ತಾಲೂಕು ಅಧ್ಯಕ್ಷ ಶರಣೋಜಿ ಪವಾರ್ ಮಾತನಾಡಿ, ಕಳೆದ 7 ವರ್ಷಗಳಿಂದ ಹಿರಿಯ ಆರೋಗ್ಯ ಸಂದರ್ಶಕರ ಹುದ್ದೆ ಭರ್ತಿಯಾಗಿರುವುದಿಲ್ಲ. ಕೋಠಾ, ಗುರುಗುಂಟಾ, ಐದಭಾವಿ, ದೇವರಭೂಪುರ 4 ಸಬ್‌ಸೆಂಟರ್‌ಗಳಿಗೆ ಪುರುಷ ಆರೋಗ್ಯ ಸಂದರ್ಶಕರಿದ್ದು, ಮಹಿಳೆಯರನ್ನು ನೇಮಿಸಬೇಕು. ಆಸ್ಪತ್ರೆ ವ್ಯಾಪ್ತಿ ವಿಸ್ತಾರವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅವಘಡ ಸಂಭವಿಸುತ್ತಿದ್ದು, ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು. ನಿರ್ಲಕ್ಷಿೃಸಿದರೆ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿದ ತಾಲೂಕು ಆರೋಗ್ಯಾಧಿಕಾರಿ ಅಮರೇಶ್, ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಗಮನಕ್ಕೆ ತರಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net