ಗೊಲಪಲ್ಲಿ ಯೋಜನೆ ಅನುಷ್ಠಾನ ಸಲ್ಲ; ಜಲವಿದ್ಯುತ್ ಯೋಜನೆ ವಿರೋಧಿ ಒಕ್ಕೂಟದ ಮುಖಂಡ ಆರ್.ಮಾನಸಯ್ಯ ಒತ್ತಾಯ

26112021 Hutti gold mine formars protest
Published on

ತಹಸೀಲ್ದಾರ್ ಸೈಯದ್ ಶಂಶಾಲಂಗೆ ಮನವಿ


ಹಟ್ಟಿಚಿನ್ನದಗಣಿ: ಹಿಂದಿನ ಸಿಎಂ ಬಿಎಸ್‌ವೈ ಘೋಷಿಸಿದ ಗೊಲಪಲ್ಲಿ ಜಲ ವಿದ್ಯುತ್ ಯೋಜನೆಯನ್ನು ಯಾವುದೇ ಕಾರಣಕ್ಕೂ ಕಾರ್ಯರೂಪಕ್ಕೆ ತರಬಾರದೆಂದು ಗೊಲಪಲ್ಲಿ ಜಲವಿದ್ಯುತ್ ಯೋಜನೆ ವಿರೋಧಿ ಒಕ್ಕೂಟದ ಮುಖಂಡ ಆರ್.ಮಾನಸಯ್ಯ ಒತ್ತಾಯಿಸಿದರು.

ಸಮೀಪದ ಗುರುಗುಂಟಾ ಬಳಿಯ ಗೌಡೂರು ಮಾರ್ಗದಲ್ಲಿ ಆಯೋಜಿಸಿದ್ದ ಧರಣಿಯಲ್ಲಿ ಶುಕ್ರವಾರ ಮಾತನಾಡಿದರು. 10 ಸಾವಿರ ಕೋಟಿ ರೂ.ವೆಚ್ಚದ ಯೋಜನೆಯನ್ನು ವಿದ್ಯುತ್ ಉತ್ಪಾದನೆಗೆ ನಮ್ಮ ಭಾಗದಲ್ಲಿ ಅಳವಡಿಸುವ ಅವಶ್ಯಕತೆಯಿಲ್ಲ. ಇದು ಜಾರಿಗೆ ಬಂದಿದ್ದೆ ಆದರೆ, ಸುತ್ತಲಿನ 15 ಹಳ್ಳಿಗಳ ಜನರ ಬದುಕು ಬೀದಿಗೆ ಬರಲಿದೆ. ಅದರ ಬದಲು ತಾಲೂಕಿನಲ್ಲಿ ಸಾರ್ವಜನಿಕ ಉದ್ದಿಮೆ ಹಾಕಿ ಉದ್ಯೋಗ ಸೃಷ್ಟಿಸುವ ಕೆಲಸ ಮಾಡಬೇಕು. ಸರ್ಕಾರ ಹಠಮಾರಿ ಧೋರಣೆ ಅನುಸರಿಸಬಾರದು. 15ದಿನಗಳೊಳಗೆ ಯೋಜನೆ ಕೈಬಿಡುವ ನಿರ್ಧಾರವನ್ನು ಪ್ರಕಟಿಸಬೇಕು. ಇಲ್ಲವಾದರೆ ಜೇವರ್ಗಿ-ಚಾಮರಾಜನಗರ 150(ಎ)ರಾಷ್ಟ್ರೀಯ ಹೆದ್ದಾರಿ ಸಮಚಾರ ಬಂದ್ ಮಾಡುವ ಮೂಲಕ ಉಗ್ರಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಗೊಲಪಲ್ಲಿ, ಗುರುಗುಂಟಾ, ಪೈದೊಡ್ಡಿ, ಗೌಡೂರು, ಯರಜಂತಿ ಸೇರಿ ಸುತ್ತಲಿನ 10-12 ಹಳ್ಳಿಗಳ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಂತರ ಲಿಂಗಸುಗೂರು ತಹಸೀಲ್ದಾರ್ ಸೈಯದ್ ಶಂಶಾಲಂಗೆ ಮನವಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net