ನಿತ್ಯ 10 ಕಿಲೋ ಚಿನ್ನ ಉತ್ಪಾದನೆ

08102022 hutti manappa vajjal
Published on

ಹಟ್ಟಿಚಿನ್ನದಗಣಿ: ದಿನಕ್ಕೆ ಸರಾಸರಿ 10 ಕಿಲೋ ಚಿನ್ನ ಉತ್ಪಾದನೆ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಹಟ್ಟಿಚಿನ್ನದಗಣಿ ಕಂಪನಿ ಅಧ್ಯಕ್ಷ ಮಾನಪ್ಪ ಡಿ.ವಜ್ಜಲ್ ಹೇಳಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾರ್ಮಿಕರು ಮತ್ತು ಅಧಿಕಾರಿಗಳ ಶ್ರಮದಿಂದಾಗಿ ಕಂಪನಿ ಲಾಭದಲ್ಲಿದೆ. ದಸರಾಕ್ಕೆ ಬೋನಸ್ ವಿತರಿಸಲಾಗಿದೆ. ಗಣಿ ಪ್ರದೇಶದಲ್ಲಿ ಸಂಚಾರ ನಿರ್ಬಂಧಿಸಿ ಅಧಿಸೂಚಿತ ಪ್ರದೇಶದ ಹೊರಗೆ ಬೈಪಾಸ್ ರಸ್ತೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಗಣಿ ಆಸ್ಪತ್ರೆ ಮೇಲ್ದರ್ಜೇಗೆ, ಹುದ್ದೆಗಳ ಭರ್ತಿ, ವೈದ್ಯಕೀಯ ಅನರ್ಹತೆ ಆಧಾರದ ಮೇಲೆ ಕಾರ್ಮಿಕರ ಅವಲಂಬಿತ ಕುಟುಂಬದ ಸದಸ್ಯರಿಗೆ ನೌಕರಿ ನೀಡಲು ಕ್ರಮಕೈಗೊಳ್ಳಲಾಗುವುದು ಎಂದರು.

ದಳಪತಿ ಗುಂಡಪ್ಪಗೌಡ ಪೊಲೀಸ್ ಪಾಟೀಲ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಗುಂಡಪ್ಪಗೌಡ ಗುರೀಕಾರ್, ಮುದಗಲ್ ಪುರಸಭೆ ಸದಸ್ಯ ಫಕಿರಪ್ಪ ಕುರಿ, ತಾಪಂ ಮಾಜಿ ಸದಸ್ಯ ಗೋವಿಂದ್ ನಾಯಕ್ ಗಲಗ್, ಪಪಂ ಸದಸ್ಯ ಪರಮೇಶ್ ಯಾದವ್, ಪ್ರಮುಖರಾದ ಬಾಲಪ್ಪ ನಾಯಕ್, ವಿಜಯಕುಮಾರ್ ಸಜ್ಜನ್, ರಮೇಶ್ ಉಳಿಮೇಶ್ವರ, ರವಿ, ಯಂಕೋಬ್ ಪವಾಡೆ, ಶಿವಪ್ರಸಾದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net