ಗೌರಿ-ಗಣೇಶ ಹಬ್ಬ ಶಾಂತಿಯುತ

GANESHA
ಹಟ್ಟಿ ಪಟ್ಟಣದ ಅಂಬೇಡ್ಕರ್ ಭವನ ಎದುರು ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮಂಡಳಿಗೆ ಡಿವೈಎಸ್ಪಿ ಎಸ್.ಮಂಜುನಾಥ್ ಹಾಗೂ ಸಿಪಿಐ ಪ್ರಕಾಶ್ ಎಲ್.ಮಾಳಿ ಭೇಟಿ ನೀಡಿದರು. ವಿನೋದ್ ಕಮಲದಿನ್ನಿ, ಮಹೇಶ್, ಎಚ್.ಕೆ. ಲಿಂಗಯ್ಯ, ಯಮನೂರ್, ಸುನೀಲ್, ರವಿಕುಮಾರ್ ಇದ್ದರು.
Published on

ಹಟ್ಟಿಚಿನ್ನದಗಣಿ: ಗೌರಿ-ಗಣೇಶ ಹಬ್ಬವನ್ನು ತಾಲೂಕಿನಾದ್ಯಂತ ಶಾಂತಿಯುತ ಹಾಗೂ ಸಂಭ್ರಮದಿಂದ ಆಚರಿಸಲಾಗಿದೆ ಎಂದು ಡಿವೈಎಸ್ಪಿ ಎಸ್.ಮಂಜುನಾಥ್ ಹೇಳಿದರು.

ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ನಗರದ ಅಂಬೇಡ್ಕರ್ ಭವನ ಮುಂದೆ ಪ್ರತಿಷ್ಠಾಪಿಸಿದ್ದ ಗಣೇಶ ಮಂಡಳಿಗೆ ಭೇಟಿ ನೀಡಿ ಗುರುವಾರ ಮಾತನಾಡಿದರು.

ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ನಿಯಮಾನುಸಾರ ಗಣೇಶನ ಪ್ರತಿಷ್ಠಾಪನೆ, ಮೆರವಣಿಗೆ, ವಿಸರ್ಜನೆ ಕಾರ್ಯಕ್ರಮಗಳು ನಡೆದಿವೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಮೂಹಿಕ ಅನ್ನಸಂತರ್ಪಣೆಯಲ್ಲಿ ಕೋಮು ಸೌಹಾರ್ದತೆ ಮೆರೆದು ಸರ್ವಧರ್ಮದವರು ಹಬ್ಬವನ್ನು ಆಚರಣೆ ಮಾಡಿ ಮಾದರಿಯಾಗಿದ್ದಾರೆ ಎಂದರು.

11ನೇ ದಿನವಾದ ಶುಕ್ರವಾರ ವಿಸರ್ಜನೆಯೊಂದಿಗೆ ಗಣೇಶೋತ್ಸವ ಸಮಾರೋಪಗೊಳ್ಳಲಿದ್ದು, ಇಲಾಖೆಯು ತಾಲೂಕು ಆಡಳಿತದೊಂದಿಗೆ ಸಕಲ ಸೌಲಭ್ಯ ಕಲ್ಪಿಸಿದೆ ಎಂದರು.

ಸಿಪಿಐ ಪ್ರಕಾಶ್ ಎಲ್.ಮಾಳಿ, ಪಿಎಸ್‌ಐ ಧರ್ಮಣ್ಣ ಮಾತನಾಡಿದರು. ಸಿಬ್ಬಂದಿ ಶರಣಬಸವ ರೆಡ್ಡಿ, ಹುಚ್ಚರೆಡ್ಡಿ, ಶಿವಾನಂದ ಒಡೆಯರ್, ರಮೇಶ್, ಅಮರೇಶ್, ನಾಗಾರ್ಜುನ್ ಪತ್ತಾರ್, ಪಟ್ಟಣದ ಪ್ರಮುಖರಾದ ಆನಂದಪ್ಪ ಸೋಮನಮರಡಿ, ಎಚ್.ಎ. ಲಿಂಗಪ್ಪ, ಆದಯ್ಯ ಎಸ್.ದಳಪತಿ, ವಿನೋದ್ ಕಮಲದಿನ್ನಿ, ಮಹೇಶ್, ಎಚ್.ಕೆ. ಲಿಂಗಯ್ಯ, ಯಮನೂರ್, ಸುನೀಲ್, ರವಿಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net