ಗೌಡೂರು ಪಿಡಿಒ ಅಮಾನತು

06022023 hutti pdo
Published on

ಹಟ್ಟಿಚಿನ್ನದಗಣಿ: ಗ್ರಾಪಂ ಕಚೇರಿಗೆ ಬೀಗ ಹಾಕಿ ಕರ್ತವ್ಯಲೋಪ ಎಸಗಿದ್ದ ಗೌಡೂರು ಪಿಡಿಒ ಮಹ್ಮದ್ ಇಸಾಕರನ್ನು ಅಮಾನತುಗೊಳಿಸಿ ಜಿಪಂ ಸಿಇಒ ಶಶಿಧರ್ ಕುರೇರ ಆದೇಶ ಹೊರಡಿಸಿದ್ದಾರೆ. ಲಿಂಗಸುಗೂರು ಸಹಾಯಕ ಅವಿನಾಶ್ ಶಿಂಧೆ ವಿಧಾನಸಭೆ ಚುನಾವಣೆ ಕಾರ್ಯ ನಿಮಿತ್ತ ಗೌಡೂರು ಗ್ರಾಪಂ ಕಚೇರಿಯಲ್ಲಿರುವ ಮತಗಟ್ಟೆ ವೀಕ್ಷಣೆಗೆ ತೆರಳಿದ್ದರು. ಆಗ ಗ್ರಾಪಂ ಕಚೇರಿಗೆ ಬೀಗ ಹಾಕಲಾಗಿತ್ತು. ಪಿಡಿಒಗೆ ಹಲವು ಬಾರಿ ದೂರವಾಣಿ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಸಹಾಯಕ ಆಯುಕ್ತ ಹಾಗೂ ಇತರ ಕಂದಾಯ ಸಿಬ್ಬಂದಿ ತುಂಬಾ ಹೊತ್ತು ಕಾದರೂ ಗ್ರಾಪಂ ಸಿಬ್ಬಂದಿ ಕಚೇರಿಗೆ ಬಂದಿರಲಿಲ್ಲ.
ಈ ಹಿನ್ನೆಲೆಯಲ್ಲಿ ಪಿಡಿಒ ಹಾಗೂ ಇತರ 17 ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುವಂತೆ ಸಿಇಒಗೆ ಎಸಿ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪಿಡಿಒ ಇಸಾಕರನ್ನು ಅಮಾನತ್ತಿನಲ್ಲಿರಿಸಿ ಉಳಿದ ಸಿಬ್ಬಂದಿಗೆ ಕಾರಣ ಕೇಳೀ ನೋಟಿಸ್ ಜಾರಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net