

ಹಟ್ಟಿಚಿನ್ನದಗಣಿ: ಪಟ್ಟಣದಲ್ಲಿ ಕುಡಿವ ನೀರು, ವಿದ್ಯುತ್, ಶಾಲೆ-ಕಾಲೇಜು, ಆಸ್ಪತ್ರೆಗಳ ಅಭಿವೃದ್ಧಿಗೆ ಜನರು ಹೋರಾಟ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಕೆಕೆಆರ್‌ಡಿಬಿಯ ಒಂದು ಕೋಟಿ ರೂ. ಅನುದಾನದಲ್ಲಿ ಸೋಮವಾರ ಸಂಜೆ ಪಟ್ಟಣದ ನಾಲ್ಕನೇ ವಾರ್ಡ್‌ನಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು. ಹಟ್ಟಿ ಪಟ್ಟಣ ರಾಜಕೀಯ ಒಳಜಗಳ ಹಾಗೂ ರಾಜಕೀಯ ಪಕ್ಷಗಳ ಮುಖಂಡರಿಂದ ಹಟ್ಟಿ ಪಟ್ಟಣ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಕುಡಿವ ನೀರು, ರಸ್ತೆಗಳಿಗಾಗಿ ಪಟ್ಟಣ ಜನತೆ ಹೋರಾಟ ಮಾಡಿ ನಿಮ್ಮೂರನ್ನು ಅಭಿವೃದ್ಧಿಪಡಿಸಿಕೊಳ್ಳಬೇಕಾಗಿದೆ ಎಂದರು.
ಪಪಂ ಅಧ್ಯಕ್ಷ ಎಂಡಿಆರ್ ಸಂಧಾನಿ, ಉಪಾಧ್ಯಕ್ಷೆ ನಾಗರತ್ನಾ ಗುರಿಕಾರ, ಮುಖಂಡರಾದ ಎನ್.ಸ್ವಾಮಿ ನಾಯಿಕೊಡಿ, ಶಂಕರಗೌಡ ಬಳಗಾನೂರು, ಹನುಮಂತರಡ್ಡಿ, ಪರಮೇಶ ಯಾದವ್, ಶಿವಪುತ್ರಪ್ಪ, ಹನುಮಂತ, ರಮೇಶ ಉಳಿಮೇಶ್ವರ, ಹರೀಶ್, ಶಶಿ ಬಡಿಗೇರ್ ಇತರರಿದ್ದರು.