

ಹಟ್ಟಿಚಿನ್ನದಗಣಿ: ರಕ್ತದಾನ ಶ್ರೇಷ್ಠದಾನವಾಗಿದ್ದು, ಈ ಕಾರ್ಯದಿಂದ ಮತ್ತೊಂದು ಜೀವವನ್ನು ಉಳಿಸಬಹುದು ಎಂದು ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ(ರಿಮ್ಸ್) ವೈದ್ಯ ಅಹ್ಮದ್‌ಹುಸೇನ್ ಹೇಳಿದರು.
ಪಟ್ಟಣದ ವಿನಾಯಕ ವಿದ್ಯಾಸಂಸ್ಥೆಯಲ್ಲಿ ಹಟ್ಟಿಚಿನ್ನದಗಣಿ ಕಂಪನಿ ಆಸ್ಪತ್ರೆ ಭಾನುವಾರ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ರಕ್ತದಾನ ಮಾಡುವುದರಿಂದ ಕೊಲೆಸ್ಟ್ರಾಲ್, ರಕ್ತದೊತ್ತಡ, ಮಧುಮೇಹ ಸೇರಿದಂತೆ ಹಲವು ರೋಗಗಳನ್ನು ತಡೆಗಟ್ಟಬಹುದಾಗಿದೆ.ದೇಹದ ಯಾವುದೇ ಅಂಗವನ್ನು ಒಂದೇ ಬಾರಿ ದಾನ ಮಾಡಬಹುದು. ರಕ್ತದಾನ ಮಾತ್ರ ವರ್ಷಕ್ಕೇರಡು ಬಾರಿಯಂತೆ ಜೀವನ ಪರ್ಯಂತ ದಾನ ಮಾಡಬಹುದಾಗಿದೆ ಎಂದರು.
ಗಣಿ ಕಂಪನಿ ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ರವೀಂದ್ರನಾಥ್ ಆಯ್.ಮಾವಿನಕಟ್ಟಿ, ಆಸ್ಪತ್ರೆ ಆಡಳಿತಾಧಿಕಾರಿ ಎಂ.ಜಗನಮೋಹನ್, ವಿನಾಯಕ ಸಂಸ್ಥೆಯ ನರಸಪ್ಪ ಯಾದವ್, ಮಹೇಂದ್ರ ಕುರ್ಡಿ ಮಾತನಾಡಿದರು. ಆಸ್ಪತ್ರೆ ಸಿಬ್ಬಂದಿ ಅನಿಲ್‌ಕುಮಾರ್, ಮಹಾಂತೇಶ್ ಉಪನ್ಯಾಸಕರಾದ ಚನ್ನಬಸವ ನಾಯಕ್, ಮಹಾಂತೇಶ್, ಮಲ್ಲನಗೌಡ, ಅಮರೇಶ್ ಹಾಗೂ ವಿದ್ಯಾರ್ಥಿಗಳಿದ್ದರು.