ಯುವ ಶವ ಹೊರತೆಗೆವ ಯತ್ನ, ಮುಂದೂಡಿದ ಪೊಲೀಸರು

23102020 Hutti dead body autopsy
Published on

ಹಟ್ಟಿಚಿನ್ನದಗಣಿ: 3 ತಿಂಗಳ ಹಿಂದೆ ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕು ನಂತರ ಮೃತಪಟ್ಟಿದ್ದ ಯುವತಿ ರೇಷ್ಮಾ(18)ಳ ಮೃತ ದೇಹವನ್ನು ಶವ ಪರೀಕ್ಷೆಗೆಂದು ಹೊರ ತೆಗೆಯುವ ಯತ್ನವನ್ನು ಪೊಲೀಸ್ ಇಲಾಖೆ ಮುಂದೂಡಿದೆ.

ಮೇಲಧಿಕಾರಿಗಳ ಸೂಚನೆ ಮೇರೆಗೆ ಗುರುವಾರ ಸಂಜೆ ಖಬರಸ್ಥಾನಕ್ಕೆ , ಪಪಂ ಸಿಬ್ಬಂದಿಯೊಂದಿಗೆ ಬಂದ ಪೊಲೀಸ್ ತಂಡ ಶವ ಹೊರ ತೆಗೆಯಲು ಯತ್ನಿಸಿತು. ಆದರೆ, ಗುಂಡಿಯಲ್ಲಿ ಕೆಸರು, ನೀರು ಬರತೊಡಗಿದ ಕಾರಣ ಉದ್ದೇಶಿತ ಕೆಲಸವನ್ನು ಮುಂದೂಡಿ, ಇಂದಿನ ಕಾರ್ಯಾಚರಣೆ ಕೈಬಿಟ್ಟಿತು.

ನಡೆದದ್ದೇನು?: ಹಟ್ಟಿಚಿನ್ನದಗಣಿಯ ಜತ್ತಿ ಕಾಲನಿಯ ಯುವತಿ ರೇಷ್ಮಾ ಜು.7ರಂದು ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕಿದ್ದಳು. ಆಗ ಆಕೆ ಇನ್ನೂ ಮೃತಪಟ್ಟಿರಲಿಲ್ಲ. ವಿಷಯವನ್ನು ಪೊಲೀಸರಿಗೆ ತಿಳಿಸಿದ ಆಕೆಯ ಕುಟುಂಬದವರು, ಚಿಕಿತ್ಸೆಗೆಂದು ರಾಯಚೂರಿಗೆ ಕರೆದೊಯ್ದಿದ್ದರು. ಚಿಕಿತ್ಸೆ ಫಲಿಸದೇ ಆಕೆ ಮೃತಪಟ್ಟಿದ್ದರು. ಈ ವಿಷಯವನ್ನು ಪೊಲೀಸರಿಗೆ ತಿಳಿಸದೆ ಕುಟುಂಬದವರು ಆಕೆಯ ಅಂತ್ಯ ಸಂಸ್ಕಾರ ನೆರವೇರಿಸಿದ್ದರು. ಹೀಗಾಗಿ ಯುವತಿ ತಂದೆ ರಾಜಸಾಬ್ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ಅದರ ಭಾಗವಾಗಿ ಪರೀಕ್ಷೆಗಾಗಿ ಶವ ಹೊರ ತೆಗೆಯುವ ಯತ್ನ ಇದಾಗಿತ್ತು. ಹೆಚ್ಚಿನ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net