ಸಂತ ಹಾಥಿರಾಮ ಬಾಲಾಜಿ ಪುಣ್ಯಸ್ಮರಣೆ 11ಕ್ಕೆ

bb nayak
Published on

ಕಲಬುರಗಿ: ಬಂಜಾರ ಸಮುದಾಯದ ಮಹಾನ ತಪಸ್ವಿ, ಸಂತ ಶ್ರೀ ಹಾಥಿರಾಮ ಬಾಲಾಜಿ ೪೯೫ ಪುಣ್ಯಸ್ಮರಣೆ (ಬರ್ಸಿ) ಉತ್ಸವ ನ.೧೧ರಂದು ನಡೆಯಲಿದೆ ಎಂದು ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ ಜಿ¯್ಲÁಧ್ಯP್ಷÀ ಬಿ.ಬಿ.ನಾಯಕ ತಿಳಿಸಿದರು.

ನಗರದ ಬಂಜಾರ ಭವನದಲ್ಲಿ ಸೋಮವಾರ ಬೆಳಗ್ಗೆ ೧೧ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಬಂಜಾರ(ಲAಬಾಣಿ) ಸೇವಾ ಸಂಘದ ಗೌರವಾಧ್ಯP್ಷÀ, ಮಾಜಿ ಸಂಸದ ಡಾ.ಉಮೇಶ ಜಾಧವ್, ರಾಜ್ಯಾಧ್ಯP್ಷÀ ಎನ್.ಆರ್.ನಾಯಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಬಿ.ನಾಯಕ, ಶಾಸಕ ಡಾ.ಅವಿನಾಶ ಜಾಧವ್ ಭಾಗವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾಜಿ ಸಚಿವರಾದ ರೇವೂನಾಯಕ ಬೆಳಮಗಿ, ಬಾಬುರಾವ ಚವ್ಹಾಣ್, ಜಿಪಂ ಮಾಜಿ ಉಪಾಧ್ಯP್ಷÀ ಸುಭಾಷ ರಾಠೋಡ, ಜಿಪಂ ಮಾಜಿ ಉಪಾಧ್ಯP್ಷÀ ಪಾರ್ವತಿ ಶಂಕರ ಚವ್ಹಾಣ್, ರಾಜ್ಯ ಕಾರ್ಯಾಧ್ಯಕ್ಷ ವಿಠಲ ಜಾಧವ್, ಮಾಧವ ನಾಯಕ ಪಾಲ್ಗೊಳ್ಳಲಿz್ದÁರೆ

ಸಂತ ಶ್ರೀ ಹಾಥಿರಾಮ ಬಾಲಾಜಿ ೩೬ ವರ್ಷ ಕಠಿಣ ತಪಸ್ಸು ಮಾಡಿ ಶ್ರೀ ಹರಿ ವಿಷ್ಣು, ತಿರುಮಲ ವೇಂಕಟೇಶ್ವರ ದೇವರು ಪ್ರತ್ಯP್ಷÀರಾಗಿ ಸಾಕ್ಷಾತ ದರ್ಶನ ನೀಡಿz್ದÁರೆ. ಜತೆ ಭಗವಂತ ಸ್ವತಃ ಪಗಡೆ ಆಡಿದ ಇತಿಹಾಸ ಇದ್ದು, ತಿರುಮಲದಲ್ಲಿ ಶ್ರೀ ವೆಂಕಟೇಶ್ವರ ದೇವಸ್ಥಾನದ ಪಕ್ಕದಲ್ಲಿ ಶ್ರೀ ಹಾಥಿರಾಮ ಬಾಲಾಜಿ ಮಂದಿರವಿದೆ ಎಂದು ಹೇಳಿದರು.

ಸಂಘಟನೆಯ ರಾಜು ಮಾನಸಿಂಗ್ ಚವ್ಹಾಣï(ಆರ್‌ಎಂಸಿ), ಆನಂದ ಚವ್ಹಾಣ ಚಿಂಚೋಳಿಕರ್, ಲಕ್ಷö್ಮಣ ಚವ್ಹಾಣ್, ಲಾಲಪ್ಪ ರಾಠೋಡ, ಗಣಪತಿ ರಾಠೋಡ, ಲಲಿತಾ ರಾಠೋಡ, ರೇಣುಕಾ ರಾಠೋಡ, ಸುನೀತಾ ಜಾಧವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net