ಹಾಥರಸ್‌ ಅತ್ಯಾಚಾರ ಪ್ರಕರಣ ಮುಚ್ಚಿ ಹಾಕುವ ಯತ್ನ: ಶಾಸಕ ಜೆ.ಎನ್.ಗಣೇಶ ಆರೋಪ

JN Ganesh Kampli
ಶಾಸಕ ಜೆ.ಎನ್.ಗಣೇಶ್
Published on

ಕುರುಗೋಡು: ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಯುವತಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಅಲ್ಲಿನ ಸರ್ಕಾರ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಶಾಸಕ ಜೆ.ಎನ್.ಗಣೇಶ್ ಆರೋಪಿಸಿದರು.

ಹಾಥರಸ್ ಪ್ರಕರಣ ಖಂಡಿಸಿ ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ಪಂಜಿನ ಮೆರವಣಿಗೆ ಬಳಿಕ ಮಾತನಾಡಿದರು. ಸಂತ್ರಸ್ತೆ ಕುಟುಂಬಸ್ಥರ ಭೇಟಿಗೆ ತೆರಳಿದ ನಾಯಕ ರಾಹುಲ್ ಗಾಂಧಿಯನ್ನೂ ಅಲ್ಲಿನ ಪೊಲೀಸ್ ಅಧಿಕಾರಿಗಳು ಅಮಾನವೀಯವಾಗಿ ನಡೆಸಿಕೊಂಡಿದ್ದು, ದುರಾಡಳಿತಕ್ಕೆ ಸಾಕ್ಷಿಯಾಗಿದೆ ಎಂದರು.

ಬಿಜೆಪಿಯಲ್ಲಿರುವ ಶ್ರೀರಾಮುಲು ಹಾಗೂ ರಾಜು ಗೌಡ ಹಾಗೂ ನಮ್ಮ ಸಮುದಾಯದ ಶಾಸಕ, ಸಂಸದರು ಕೇವಲ ಚುನಾವಣೆ ಸಂದರ್ಭ ಮಾತ್ರ ಜಾತಿಯನ್ನು ಮುಂದಿಟ್ಟು ಗೆದ್ದು ಹೋಗುತ್ತಾರೆ. ಬಳಿಕ ಸ್ಪಂದಿಸುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಬಳ್ಳಾರಿ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಕೆ.ಗಾದಿಲಿಂಗ ಮಾತನಾಡಿದರು. ಜಿಪಂ ಸದಸ್ಯ ನಾರಾಭರತ್ ರೆಡ್ಡಿ, ಕೆಪಿಸಿಸಿ ಸದಸ್ಯರಾದ ಕಲ್ಲುಕಂಬ ಪಂಪಾಪತಿ, ಮಹಮ್ಮದ್ ಗೌಸ್, ಎನ್‌ಎಸ್‌ಯುಐ ಜಿಲ್ಲಾ ಅಧ್ಯಕ್ಷ ಸಿದ್ದು ಹಳೇಗೌಡ್ರ, ಬ್ಲಾಕ್ ಅಧ್ಯಕ್ಷ ಬಂಗಿ ಮಲ್ಲಯ್ಯ, ಕೆ.ಗಾದಿಲಿಂಗ, ಚನ್ನಪಟ್ಟಣ ಮಲ್ಲಿಕಾರ್ಜುನ, ಓಂಕಾರಪ್ಪ, ಎನ್.ನಾಗರಾಜ, ಜೋಗಿ ಸುಂಕಪ್ಪ, ಕಲ್ಲುಕಂಬ ಮಲ್ಲಿಕಾರ್ಜುನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net