ಅತ್ಯಾಚಾರಿಗಳ ವಿರುದ್ಧ ನಿಲ್ಲದ ಆಕ್ರೋಶ

Hiriyuru protest
Published on

ಹಿರಿಯೂರು: ಉತ್ತರ ಪ್ರದೇಶದ ಹಾಥರಸ್‌ನ ಯುವತಿ ಅತ್ಯಾಚಾರ ಪ್ರಕರಣ ಖಂಡಿಸಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಮಂಗಳವಾರ ಪ್ರತಿಭಟಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಹೆಣ್ಣು ಮಕ್ಕಳ ಅಪಹರಣ, ಅತ್ಯಾಚಾರ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದರೂ ಸರ್ಕಾರಗಳು ಕ್ರಮ ಕೈಗೊಳ್ಳದಿರುವುದು ವಿಷಾದನೀಯ. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಮೂಲಕ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

ತಾಲೂಕು ಕರವೇ ಅಧ್ಯಕ್ಷ ಉದಯಶಂಕರ್ ಹುಚ್ಚವ್ವನಹಳ್ಳಿ, ಪದಾಧಿಕಾರಿಗಳಾದ ಗೋ.ಬಸವರಾಜ್, ರಾಮಕೃಷ್ಣಪ್ಪ, ಕೆ.ಎಂ.ಲೋಹಿತ, ರಾಮು ಬೆಳೆಗೆರೆ, ಮಹಾಲಿಂಗಪ್ಪ, ಮುಬಾರಕ್, ವಿಜಯಕುಮಾರ್, ಎಲ್.ಎನ್.ಸ್ವಾಮಿನಾಥ, ಜಾಫರ್, ಕಾಂತರಾಜು, ರಫೀಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net