ಹುಬ್ಬಳ್ಳಿ: ತ್ರಿಶೂಲ ದೀಕ್ಷಾ ಕಾರ್ಯಕ್ರಮದಲ್ಲಿ ಕಬ್ಬಿಣದ ಆಯುಧ ಪ್ರದರ್ಶಿಸಿ, ಮಹಿಳೆಯರಿಗೆ ತ್ರಿಶೂಲ ನೀಡಿದ, hate speech ದ್ವೇಷ ಭಾಷಣದ ಆರೋಪದಡಿ ಪ್ರಮೋದ ಮುತಾಲಿಕ್ ಸೇರಿ 6 ಜನರ ವಿರುದ್ಧ ಇಲ್ಲಿಯ ಉಪನಗರ ಠಾಣೆಯಲ್ಲಿ ಸ್ವಯಂ ದೂರು ದಾಖಲಾಗಿದೆ.
ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹಾಗೂ ಇತರರು ಕಾರ್ಯಕ್ರಮಕ್ಕೆ ಪೂರ್ವಾನುಮತಿ ಪಡೆಯದೆ ಅಕ್ರಮವಾಗಿ ನಡೆಸಿದ್ದಾರೆ.
ಮುತಾಲಿಕ್ ಅವರು ತಮ್ಮ ಭಾಷಣದಲ್ಲಿ ಅನ್ಯ ಕೋವಿನ ಹೆಸರು ಉಲ್ಲೇಖಿಸಿ ದ್ವೇಷ ಭಾಷಣ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು,
ಪ್ರಮೋದ ಮುತಾಲಿಕ್, ಅಣ್ಣಪ್ಪ ದಿವಟಗಿ, ಮಹಾಂತೇಶ ಟೋಂಗಳೆ, ಮಂಜುನಾಥ ಕಾಟ್ಕರ, ಬಸವರಾಜ ದರ್ಗದ, ಬಸವರಾಜ ಗಡರ ಇತರರ ವಿರುದ್ಧ ಸ್ವಯಂ ದೂರು ದಾಖಲಿಸಲಾಗಿದೆ.