

ಇಂಡಿ: ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದುಗಳ ಮೇಲೆ ದ್ವೇಷ ರಾಜಕಾರಣ ಮಾಡಲು ಮುಂದಾಗಿದ್ದು, ಕರಾವಳಿ ಭಾಗದಲ್ಲಿ ಹಿಂದು ಮುಖಂಡರ ಮೇಲೆ ಸುಖಾ ಸುಮ್ಮನೆ ಎ್.ಐ.ಆರ್. ದಾಖಲಿಸಿ ಗಡಿಪಾರು ಮಾಡುವ ಕಾರ್ಯ ಮಾಡುತ್ತಿದೆ ಎಂದು ಭಾಜಪ ಮುಖಂಡ ಕಾಸುಗೌಡ ಬಿರಾದಾರ ಆರೋಪಿಸಿದರು.
ಅವರು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕರಾಳಿ ಭಾಗದಲ್ಲಿ ಒಂದು ಕೋಮಿನ ಜನರನ್ನು ಓಲೈಕೆ ಮಾಡಿಕೊಳ್ಳಲು ಹಿಂದುಪರ ಸಂಘಟನೆಗಳ ಕಾರ್ಯಕರ್ತರು, ಮುಖಂಡರ ಮೇಲೆ ಟಾರ್ಗೆಟ್ ಮಾಡುತ್ತಿದ್ದಾರೆ. ಹಿಂದು ಕಾರ್ಯಕರ್ತರು ಮೃತರಾದರೆ ಅವರಿಗೆ ಪರಿಹಾರ ನೀಡಲ್ಲ. ಅದೇ ಇನ್ನೊಂದು ಕೋಮಿನವರು ಮೃತರಾದರೆ ಅವರಿಗೆ ಸರ್ಕಾರದಿಂದ ವಿಶೇಷ ಕಾಳಜಿ ವಹಿಸಿ ಹೆಚ್ಚಿನ ಪರಿಹಾರ ಒದಗಿಸುತ್ತಿದ್ದಾರೆ ಎಂದು ದೂರಿದರು.
ನಿಮ್ಮ ಸರ್ಕಾರದ ಧೋರಣೆಯನ್ನು ಇಡೀ ರಾಜ್ಯದ ಜನ ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಹಿಂದು ಮುಖಂಡರನ್ನು ಟಾರ್ಗೆಟ್ ಮಾಡುವುದು, ಗಡಿಪಾರು ಮಾಡುವುದನ್ನು ಬಿಡದಿದ್ದರೆ ಹಿಂದುಪರ ಸಂಘಟನೆಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೂಡಲೇ ಹಿಂದು ಕಾರ್ಯಕರ್ತರ ಮೇಲೆ ದಾಖಲಿಸಿದ ಎಲ್ಲ ಎ್.ಐ.ಆರ್. ರದ್ದುಗೊಳಿಸಬೇಕು. ಪೊಲೀಸ್ ಇಲಾಖೆ ಕಾನೂನಿನ ಪ್ರಕಾರ ಕೆಲಸ ಮಾಡುವುದನ್ನು ಬಿಟ್ಟು ಕಾಂಗ್ರೆಸ್ ಪಕ್ಷದ ಏಜೆಂಟರಂತೆ ಕಾರ್ಯ ನಿರ್ವಹಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇತ್ತೀಚೆಗಿನ ಸಿ.ಟಿ. ರವಿ ಅವರ ಪ್ರಕರಣದಲ್ಲಿ ಪೊಲೀಸರು ನಡೆದುಕೊಂಡಿರುವ ರೀತಿ ಗಮನಿಸಿದರೆ ರಾಜ್ಯದಲ್ಲಿ ಗೂಂಡಾ ಆಡಳಿತ ಜಾರಿಯಲ್ಲಿದೆ ಎನ್ನುವುದು ತಿಳಿದು ಬರುತ್ತದೆ ಎಂದರು.