

ಬೆಂಗಳೂರು: ಸಚಿವರ ನಡುವಿನ ವ್ಯತ್ಯಾಸಗಳಿಂದ ಪ್ರತಿಪಕ್ಷಕ್ಕೆ ಸಿಕ್ಕ ಕರೊನಾ ನಿರ್ವಹಣೆ ಆರೋಪಾಸ್ತ್ರವನ್ನು ಈ ಹಂತದಲ್ಲೇ ಮೊಟಕುಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದ್ದರೆ, ವಿಷಯವನ್ನು ಜಿಲ್ಲೆ ಹಾಗೂ ತಾಲೂಕು ಹಂತಕ್ಕೆ ಕೊಂಡೊಯ್ಯಲು ಕಾಂಗ್ರೆಸ್ ನಿರ್ಧರಿಸಿದೆ. ಶುಕ್ರವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಪ್ರಶ್ನೆಗಳನ್ನು ಪುನರಾವರ್ತಿಸಿದ್ದಾರೆ. ಗುರುವಾರ ತಾವಾಡಿದ ಮಾತುಗಳನ್ನೇ ಮಗುಚಿಯಾಡುವ ಮೂಲಕ ಸರ್ಕಾರದ ಇಮೇಜ್ಗಾದ ಗಾಯ ಹಸಿಯಾಗಿಡುವ ಪ್ರಯತ್ನ ಇರುವುದನ್ನು ಸ್ಪಷ್ಟಮಾಡಿದ್ದಾರೆ. ಇನ್ನೊಂದೆಡೆ ಸರ್ಕಾರದ ಕಡೆಯಿಂದಲೂ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಸಚಿವರಾದ ಆರ್.ಅಶೋಕ, ಡಾ.ಕೆ.ಸುಧಾಕರ್ ಮುಖೇನ ಅಷ್ಟೇ ವೇಗದಲ್ಲಿ ಉತ್ತರಗಳು ಪುನರಾವರ್ತನೆಯಾಗಿವೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಯಾವುದೇ ಅಕ್ರಮ ಮಾಡಿಲ್ಲ ಎನ್ನುವುದಾದರೆ ವೈದ್ಯಕೀಯ ಉಪಕರಣಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕೆ ಭಯವೇಕೆ? ಸಚಿವರುಗಳು ಸತ್ಯವಂತರು ಎನ್ನುವುದಾದರೆ ತನಿಖೆ ಬೇಡ ಎನ್ನುವುದೇಕೆ? ಇದು ಭಂಡತನದ ಪರಮಾವಧಿ ಎಂದು ಟೀಕಿಸಿದ್ದಾರೆ. ಇವರ ಟೀಕೆಗೆ ಪ್ರತಿಯಾಗಿ ಆರ್.ಅಶೋಕ್, ಕರೊನಾ ಪರಿಕರಗಳ ಖರೀದಿಗೆ ಸಂಬಂಧಿಸಿದಂತೆ ಐವರು ಸಚಿವರು ಮಾಧ್ಯಮಗೋಷ್ಠಿಯಲ್ಲಿ ದಾಖಲೆಗಳೊಂದಿಗೆ ಉತ್ತರಿಸಿಯಾಗಿದೆ. ಹೀಗಾಗಿ ತನಿಖೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಪುನರುಚ್ಚರಿಸಿದರು. ಸಿದ್ದರಾಮಯ್ಯ ಈಗ ಮುಖ್ಯಮಂತ್ರಿಯಲ್ಲ, ಪ್ರತಿಪಕ್ಷ ನಾಯಕರು. ಸಲಹೆ ಕೊಡಬಹುದೇ ಹೊರತು, ಆದೇಶ ನೀಡುವಂತಿಲ್ಲ. ಹಿಂದೆ ಅಧಿಕಾರದಲ್ಲಿ ಇದ್ದಾಗ ಎಷ್ಟು ಆರೋಪಗಳಿದ್ದವು, ಅವೆಲ್ಲದಕ್ಕೂ ತನಿಖೆ ಮಾಡಿಸಿದ್ದಾರೆಯೇ ಎಂದು ಮರು ಪ್ರಶ್ನಿಸಿದರು. ಸರ್ಕಾರ ಹೀಗೆ ಎದಿರೇಟು ಕೊಡುತ್ತಾ ವಿಷಯಾಂತರ ಮಾಡಿ ಆರೋಪಗಳ ತೀವ್ರತೆ ಕಡಿಮೆ ಮಾಡಲು ಪ್ರಯತ್ನಿಸಿರುವಾಗಲೇ ಪ್ರತಿಪಕ್ಷ ವಿಷಯವನ್ನು ಜಿಲ್ಲೆಗೆ ಕೊಂಡೊಯ್ಯುವ ಇರಾದೆ ಹೊಂದಿದೆ. ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚರ್ಚೆ ನಡೆಸಿದ್ದು, 30 ಜಿಲ್ಲೆಗೆ 30 ತಂಡ ಕಳಿಸಲು ನಿರ್ಧರಿಸಿದ್ದಾರೆ.
ಪಾಯಿಂಟ್ ಟುಬಿ ನೋಟೆಡ್
ಸರ್ಕಾರದ ಆಶಯ
ಕೈ ಉದ್ದೇಶವೇನು?
ಕಾಂಗ್ರೆಸ್ ಭ್ರಷ್ಟಾಚಾರದ ಜನಕ. ಹೀಗಾಗಿ ಆ ಪಕ್ಷದ ಮುಖಂಡರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಕೊಳಕು ರಾಜಕಾರಣ ಮಾಡುತ್ತಿದ್ದಾರೆ. | ಸುರೇಶ ಅಂಗಡಿ ರೈಲ್ವೆ ಖಾತೆ ರಾಜ್ಯ ಸಚಿವ
ಸಿದ್ದು-ಸುಧಾಕರ್ ಜಗಳ್ಬಂದಿ
ಬೆಂಗಳೂರು: ಕರೊನಾ ನಿರ್ವಹಣೆ ಕುರಿತ ಪ್ರತಿಪಕ್ಷದ ಆರೋಪಕ್ಕೆ ಸಚಿವ ಡಾ.ಸುಧಾಕರ್ ಗುರುವಾರ ತೀಕ್ಷ್ಣ ಉತ್ತರ ನೀಡಿದ್ದು, ಸಿದ್ದರಾಮಯ್ಯಗೆ ಇರಿಸುಮುರಿಸಾಗುವಂತೆ ಸವಾಲು ಹಾಕಿದ್ದರು. ಇದಕ್ಕೆ ಸಿದ್ದರಾಮಯ್ಯ ಕೂಡ ತಮ್ಮ ಎಂದಿನ ಶೈಲಿಯಲ್ಲಿ ಉತ್ತರ ಕೊಟ್ಟಿದ್ದಾರೆ.
ಸಿದ್ದು ವಾದ:
ಸುಧಾಕರ್ ಗುದ್ದು:
ಕೋವಿಡ್ ಸಂಬಂಧ ಸಮಾಜ ಕಲ್ಯಾಣ ಇಲಾಖೆ 500 ಕೋಟಿ ರೂ. ಖರ್ಚು ಮಾಡಿದೆ ಎಂದು ಸಿದ್ದರಾಮಯ್ಯ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್, ಮಾಸ್ಕ್ ಮತ್ತು ಥರ್ಮಲ್ ಸ್ಕಾ್ಯನರ್ಗಳಿಗೆ 1.24 ಕೋಟಿ ರೂ ಮಾತ್ರ ಖರ್ಚು ಮಾಡಿದ್ದೇವೆ. ಯಾವ ಇಲಾಖೆಯಲ್ಲೂ ಅಕ್ರಮ ಆಗಿಲ್ಲ. ಎಲ್ಲ ಇಲಾಖೆ ಪಾರದರ್ಶಕವಾಗಿ ನಡೆದುಕೊಂಡಿವೆ. . | ಗೋವಿಂದ ಕಾರಜೋಳ ಉಪಮುಖ್ಯಮಂತ್ರಿ