

ಮಂಡ್ಯ: ಮನುಷ್ಯ ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು. ಕೋಪದ ಕೈಗೆ ಬುದ್ದಿ ಕೊಟ್ಟು ತಪ್ಪುಗಳನ್ನು ಮಾಡಿ ಜೀವನವೆಲ್ಲ ಕೊರಗುವಂತೆ ಮಾಡಿಕೊಳ್ಳಬೇಡಿ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಲೋಕೇಶ್ ಸಲಹೆ ನೀಡಿದರು.
ನಗರದ ಉಪ ಕಾರಾಗೃಹದ ಆವರಣದಲ್ಲಿ ಕೃಷಿಕ್ ಲಯನ್ಸ್, ಹೊನ್ನಕರ್ಣಿಕ ಸಾಂಸ್ಕೃತಿಕ ಟ್ರಸ್ಟ್, ಜಿಲ್ಲಾ ಕಾರಾಗೃಹ ಸಹಯೋಗದಲ್ಲಿ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಕಾರಾಗೃಹ ವಾಸಿಗಳ ಮನಪರಿವರ್ತನೆ ಹಾಗೂ ಶಿವಾರ ಉಮೇಶ್ ತಂಡದಿಂದ ಹಾಸ್ಯ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರಾಗೃಹಕ್ಕೆ ಬರುವವರೆಲ್ಲರೂ ಕೆಟ್ಟವರಲ್ಲ, ಒಂದು ಕ್ಷಣ ಮೈಮರೆತು ಮಾಡುವ ತಪ್ಪಿನಿಂದಾಗಿ ಜೀವನದಲ್ಲಿ ಶಿಕ್ಷೆಗೊಳಗಾಗುವಂತಹ ಸನ್ನಿವೇಶ ಎದುರಾಗುತ್ತದೆ. ಇದಕ್ಕಾಗಿ ಯಾರೂ ಚಿಂತಿಸುವ ಅಗತ್ಯವೂ ಇಲ್ಲ. ಜೈಲಿಗೆ ಬರುವುದೇ ಒಂದು ಶಿಕ್ಷೆ. ಆದರೆ ಇಲ್ಲಿಗೆ ಬಂದ ಮೇಲೆ ಯಾವುದೇ ಶಿಕ್ಷೆಯೂ ಇರುವುದಿಲ್ಲ. ಒತ್ತಡವೂ ಇರುವುದಿಲ್ಲ. ಇದೊಂದು ಮನಪರಿವರ್ತನ ಕೇಂದ್ರ. ಇಲ್ಲಿ ಎಲ್ಲವನ್ನೂ ಕಲಿಯಬಹುದು ಎಂದು ಹೇಳಿದರು.
ಕೃಷಿಕ್ ಲಯನ್ಸ್‌ನ ಆಡಳಿತಾಧಿಕಾರಿ ಕೆ.ಟಿ.ಹನುಮಂತು, ಕೃಷಿಕ್ ಲಯನ್ಸ್‌ನ ಅಧ್ಯಕ್ಷ ಮೋಹನ್‌ಕುಮಾರ್, ಕೋಶಾಧಿಕಾರಿ ರಮೇಶ್, ರಕ್ಷಿತ್‌ರಾಜ್, ನಾಗರತ್ನಾ, ಕಲಾವಿದ ಉಮೇಶ್, ಮಹದೇವ, ಶಿವಲಿಂಗಯ್ಯ, ಕಿರಣ್, ನಿಂಗರಾಜು, ಪ್ರಕಾಶ್ ಇತರರಿದ್ದರು.