ಹಸೂಡಿ ಕ್ಷೇತ್ರ ಅಭಿವೃದ್ಧಿಗೆ 55.05 ಕೋಟಿ ರೂ. ಅನುದಾನ: ಜಿಪಂ ಉಪಾಧ್ಯಕ್ಷೆ ವೇದಾ ವಿಜಯ್‌ಕುಮಾರ್

1111
Published on

ಶಿವಮೊಗ್ಗ: ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದರೂ ಕಳೆದ ಐದು ವರ್ಷದಲ್ಲಿ 55.05 ಕೋಟಿ ರೂ. ಅನುದಾನವನ್ನು ವಿವಿಧ ಯೋಜನೆಗೆ ತಂದು ಹಸೂಡಿ ಜಿಪಂ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದೇನೆ ಎಂದು ಜಿಪಂ ಉಪಾಧ್ಯಕ್ಷೆ ವೇದಾ ವಿಜಯ್‌ಕುಮಾರ್ ತಿಳಿಸಿದರು.

ಹಸೂಡಿ ಕ್ಷೇತ್ರ ಮಾತ್ರವಲ್ಲದೇ ಜಿಲ್ಲೆಯ ಅಭಿವೃದ್ಧಿಗೂ ಪೂರಕವಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಲು ಸಹಕಾರ ನೀಡಿದ್ದೇನೆ. ಉಪಾಧ್ಯಕ್ಷೆಯಾಗಿ ಮಾಡಿದ ಕೆಲಸ ತೃಪ್ತಿದಾಯಕವಾಗಿದ್ದು ಹಸೂಡಿ ಕ್ಷೇತ್ರದ ಜನತೆ ತನ್ನ ಮೇಲಿಟ್ಟ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಂಡಿದ್ದೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಡಿ 2016-2017ರಿಂದ 2020-21ನೇ ಸಾಲಿನವರೆಗೆ 196.16 ಲಕ್ಷ ರೂ. ಅನುದಾನ ಸಿಕ್ಕಿದೆ. ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯಿಂದ 82 ಲಕ್ಷ ರೂ. ಅನುದಾನದಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ವೈಯಕ್ತಿಕ ಪ್ರತಯತ್ನದಿಂದ 4.08 ಕೋಟಿ ರೂ. ವೆಚ್ಚದಲ್ಲಿ ಡಾ. ಬಿ.ಆರ್.ಅಂಬೇಡ್ಕರ್/ ಡಾ. ಬಾಬು ಜಗಜೀವನ್ ರಾಮ್ ಯೋಜನೆಯಡಿ 34 ಸಮುದಾಯ ಭವನಗಳ ನಿರ್ಮಾಣ, 2.90 ಕೋಟಿ ರೂ. ವೆಚ್ಚದಲ್ಲಿ ವಸತಿ ರಹಿತರಿಗೆ ಹಸೂಡಿ ಕ್ಷೇತ್ರದಲ್ಲಿ 200 ಮನೆಗಳ ಹಂಚಿಕೆ ಮಾಡಲಾಗಿದೆ. ಡಿ.ಕೆ.ಶಿವಕುಮಾರ್ ಅವರು ಇಂಧನ ಸಚಿವರಾಗಿದ್ದಾಗ 395.99 ಲಕ್ಷ ರೂ. ವೆಚ್ಚದಲ್ಲಿ ಸಂತೆಕಡೂರಿನಲ್ಲಿ ವಿದ್ಯುತ್ ಸಬ್‌ಸ್ಟೇಷನ್ ಸ್ಥಾಪಿಸಲಾಗಿದೆ ಎಂದರು.

ಸಂತೇಕಡೂರು ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷೆ ವಾಣಿ ಗಿರೀಶ್, ಸೋಗಾನೆ ಗ್ರಾಪಂ ಅಧ್ಯಕ್ಷ ಅನಿಲ್‌ಕುಮಾರ್, ದೇವಿಕುಮಾರ್, ಪ್ರಭಾಕರ ಗೌಡ, ಗಿರೀಶ್, ಕೃಷ್ಣಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net