ಸತತ ಪ್ರಯತ್ನ, ಪರಿಶ್ರಮ ಯಶಸ್ಸಿನ ಗುಟ್ಟು

ಡಾ.ಹೆಗಡೆ ಅಭಿಪ್ರಾಯ
ಅರಸೀಕೆರೆ ಮಾರುತಿ ನಗರ ಬಡಾವಣೆಯ ಇಂಜಿನಿಯರಿಂಗ್ ವಿದ್ಯಾರ್ಥಿನಿ ಪಾಲ್ಗುಣಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಡಾ.ಡಾ.ಬಿ.ವಿ.ಶೆಟ್ಟಿ (ಹೆಗಡೆ), ಸುಜಾತಾ ರಮೇಶ್, ಕಿರಣ್ ಕುಮಾರ್, ಸಂತೋಷ್ ಇತರರಿದ್ದರು.
ಅರಸೀಕೆರೆ ಮಾರುತಿ ನಗರ ಬಡಾವಣೆಯ ಇಂಜಿನಿಯರಿಂಗ್ ವಿದ್ಯಾರ್ಥಿನಿ ಪಾಲ್ಗುಣಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಡಾ.ಡಾ.ಬಿ.ವಿ.ಶೆಟ್ಟಿ (ಹೆಗಡೆ), ಸುಜಾತಾ ರಮೇಶ್, ಕಿರಣ್ ಕುಮಾರ್, ಸಂತೋಷ್ ಇತರರಿದ್ದರು.
Published on: 

ಅರಸೀಕೆರೆ: ಸಹಕಾರ ಮತ್ತು ಸಹಬಾಳ್ವೆ ಸಮಾಜದ ಪ್ರಗತಿಗೆ ಪೂರಕವಾಗಲಿದೆ ಎಂದು ವೈದ್ಯ ಡಾ.ಬಿ.ವಿ.ಶೆಟ್ಟಿ (ಹೆಗಡೆ) ಹೇಳಿದರು.

ಕಲ್ಪತರು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಪಾಲ್ಗುಣಗೆ ನಗರಸಭೆ ಸದಸ್ಯೆ ಸುಜಾತಾ ರಮೇಶ್ ಮತ್ತು ಸ್ನೇಹಿತರ ಬಳಗದಿಂದ ಶನಿವಾರ ಉಚಿತ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿದರು.

ವಿದ್ಯೆ ಸಾಧಕರ ಸೊತ್ತು ಎಂಬುದನ್ನು ಮರೆಯಬಾರದು. ಸತತ ಪ್ರಯತ್ನ, ಪರಿಶ್ರಮದಿಂದ ಯಶಸ್ಸು ಸಾಧಿಸಬಹುದು ಎನ್ನುವುದಕ್ಕೆ ಹಲವು ನಿದರ್ಶನಗಳಿವೆ. ಕಲಿತ ವಿದ್ಯೆಯ ಬಲದಿಂದ ದುಡಿಮೆ ಜತೆಗೆ ಇತರರಿಗೆ ಸಹಾಯ ಮಾಡುವ ಮನೋಭಾವ ರೂಢಿಸಿಕೊಳ್ಳಬೇಕು. ಆಗ ಮಾತ್ರ ಕಲಿಕೆಗೆ ಬೆಲೆ ದೊರೆಯಲಿದೆ ಎಂದರು.

ನಗರಸಭೆ ಮಾಜಿ ಸದಸ್ಯೆ ಸುಜಾತಾ ರಮೇಶ್ ಮಾತನಾಡಿ, ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರ ವಿತರಿಸುವ ಕಾಯಕವನ್ನು ಬಳಗದ ಸಹಕಾರದಿಂದ ಮಾಡಿಕೊಂಡು ಬರಲಾಗುತ್ತಿದೆ. ಅಶಕ್ತರಿಗೆ ಮಾತ್ರೆ, ಔಷಧ ಕಿಟ್, ಶಾಲಾ ಮಕ್ಕಳಿಗೆ ಬ್ಯಾಗ್, ಪುಸ್ತಕ, ಇಂಜಿನಿಯರಿಂಗ್ ಓದುವವರಿಗೆ ಲ್ಯಾಪ್‌ಟಾಪ್ ಸೇರಿದಂತೆ ಹಲವು ಬಗೆಯ ನೆರವು ನೀಡಿದ್ದೇವೆ. ದಾನಿಗಳು ಹಾಗೂ ಉದ್ಯಮಿಗಳ ಸಹಕಾರದಿಂದ ಸೂರಿಲ್ಲದ ಅನೇಕರಿಗೆ ನೆರವು ನೀಡಿರುವುದು ಖುಷಿ ತಂದಿದೆ. ಪರಿಸರ ಸ್ನೇಹಿ ಚಟುವಟಿಕೆಗಳು, ಸಿಸಿಟಿವಿ ಅಳವಡಿಕೆ ಒಳಗೊಂಡಂತೆ ಹತ್ತಾರು ಜನೋಪಯೋಗಿ ಕೆಲಸವನ್ನು ತಂಡ ಮಾಡುತ್ತಿದೆ ಎಂದರು.

ಸಮಾಜ ಸೇವಕ ರಮೇಶ್ ಮಾತನಾಡಿ, ಮಾರುತಿ ನಗರ ಬಡಾವಣೆಯ ಪ್ರಾಚೀನ ಆಂಜನೇಯನ ಸ್ವಾಮಿ ದೇಗುಲದ ಬಳಿ ಸಮುದಾಯ ಭವನ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ನಗರಸಭೆ ಪೌರಾಯುಕ್ತರನ್ನು ಭೇಟಿ ಮಾಡಿ ಕೆಲಸ ಪೂರ್ಣಗೊಳಿಸಲು ಮನವಿ ಮಾಡಲಾಗುವುದು ಎಂದು ಹೇಳಿದರು.

ಕರವೇ ತಾಲೂಕು ಅಧ್ಯಕ್ಷ ಕಿರಣ್ ಕುಮಾರ್, ನಗರಾಧ್ಯಕ್ಷ ಸಂತೋಷ್,ಮುಖಂಡರಾದ ಜಗನ್ನಾಥ್ ರೈ, ಶಿವಣ್ಣ, ಅರುಣ್, ಸುರೇಶ್ ನಾಯಕ್,ರವಿ ,ಶಫೀ, ರೇಷ್ಮಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net