ಮಧ್ಯರಾತ್ರಿ 12 ಗಂಟೆ ನಂತರ ಫೋಟೋಗ್ರಫಿ ನಿಷೇಧ

ಛಾಯಾಗ್ರಾಹಕರ ಸಂಘ ನಿರ್ಧಾರ
ಮದುವೆ ಹಾಗೂ ಇನ್ನಿತರ ಶುಭಕಾರ್ಯಗಳಲ್ಲಿ ಮಧ್ಯರಾತ್ರಿ 12 ಗಂಟೆ ನಂತರ ಛಾಯಾಗ್ರಹಣ ನಿಷೇಧಿಸಿರುವ ಬಗ್ಗೆ ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳು ಫಲಕ ಪ್ರದರ್ಶಿಸಿದರು.
ಮದುವೆ ಹಾಗೂ ಇನ್ನಿತರ ಶುಭಕಾರ್ಯಗಳಲ್ಲಿ ಮಧ್ಯರಾತ್ರಿ 12 ಗಂಟೆ ನಂತರ ಛಾಯಾಗ್ರಹಣ ನಿಷೇಧಿಸಿರುವ ಬಗ್ಗೆ ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳು ಫಲಕ ಪ್ರದರ್ಶಿಸಿದರು.
Published on: 

ಬೇಲೂರು: ಮದುವೆ ಹಾಗೂ ಇನ್ನಿತರ ಶುಭ ಕಾರ್ಯಗಳಲ್ಲಿ ಮಧ್ಯರಾತ್ರಿ 12 ಗಂಟೆ ನಂತರ ಛಾಯಾಗ್ರಹಣವನ್ನು ಸಂಪೂರ್ಣ ನಿಷೇಧಿಸಿದ್ದು, ಗ್ರಾಹಕರು ಸಹಕರಿಸಬೇಕು ಎಂದು ಛಾಯಾಗ್ರಾಹಕರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು.

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ರಾತ್ರಿ12 ಗಂಟೆ ನಂತರ ಛಾಯಾಗ್ರಹಣ ಮಾಡುವುದನ್ನು ನಿಷೇಧಿಸಿರುವ ಬಗ್ಗೆ ಶುಕ್ರವಾರ ಫಲಕಗಳನ್ನು ಅಳವಡಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕಲ್ಯಾಣ ಮಂಟಪಗಳಲ್ಲಿ ನಡೆಯುತ್ತಿರುವ ಸಮಾರಂಭಗಳು ತಡ ರಾತ್ರಿಯಾದರೂ ಮುಗಿಯುವುದಿಲ್ಲ. ಮದುವೆ ಕಾರ್ಯಕ್ರಮದಲ್ಲಂತೂ, ಆರತಕ್ಷತೆ ಮುಗಿದು ಪ್ರಾರಂಭವಾಗುವುದೇ 11 ಗಂಟೆ ಮೇಲಾಗಿರುತ್ತದೆ. ಶಾಸ್ತ್ರ ಮುಗಿಯುವುದು 3 ರಿಂದ 4 ಗಂಟೆಯಾಗುತ್ತಿದ್ದು, ಛಾಯಾಗ್ರಾಹಕರು ವಿಶ್ರಮಿಸಲು, ನಿದ್ರಿಸಲು ಸಮಯ ಇಲ್ಲದಂತಾಗುತ್ತಿದೆ. ರಾತ್ರಿ ನಿದ್ದೆ ಮಾಡದೆ ಬೆಳಗ್ಗೆ ಚಟುವಟಿಕೆಯಿಂದ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಜತೆಗೆ ಅವರ ಆರೋಗ್ಯವು ಹಾಳಾಗುತ್ತಿದೆ. ಆದ್ದರಿಂದ ಛಾಯಾಗ್ರಾಹಕರ ಸಂಘದಿಂದ ಮಧ್ಯರಾತ್ರಿ 12 ಗಂಟೆ ನಂತರ ಛಾಯಾಗ್ರಹಣ ಮಾಡುವುದನ್ನು ನಿಷೇಧಿಸಬೇಕೆಂಬ ತಿರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ತಾಲೂಕಿನಾದ್ಯಂತ ಇರುವ ಎಲ್ಲ ಕಲ್ಯಾಣ ಮಂಟಪಗಳಿಗೂ ಮಾಲೀಕರು ಮತ್ತು ಮೇಲ್ವಿಚಾರಕರ ಸಹಕಾರದೊಂದಿಗೆ ಸೂಚನಾ ಫಲಕ ಹಾಕಲಾಗುತ್ತಿದೆ. ಆದ್ದರಿಂದ ಗ್ರಾಹಕರು ಸಹ ಛಾಯಾಗ್ರಾಹಕರಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಛಾಯಾಗ್ರಾಹಕರ ಸಂಘದ ಮಾಜಿ ಅಧ್ಯಕ್ಷ ಎ.ಬಿ.ಪ್ರಕಾಶ್, ಖಜಾಂಚಿ ನವೀನ್, ಸಂಘಟನಾ ಕಾರ್ಯದರ್ಶಿ ಪ್ರಭುರಾವ್, ನಿರ್ದೇಶಕರಾದ ರವಿಕುಮಾರ್, ಮಧು, ಚೇತನ್, ಲಕ್ಷ್ಮೀಕಾಂತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net