ಪ್ರೇಕ್ಷಕರ ಗಮನ ಸೆಳೆದ ಟಗರು, ಹೋತಗಳ ಪ್ರದರ್ಶನ

ಶ್ರೀ ಹಾಸನಾಂಬ ದೇವಿ ಹಾಗೂ ಶ್ರೀ ಸಿದ್ಧೇಶ್ವರ ಸ್ವಾಮಿ ಜಾತ್ರಾ
hasanmba fair festival
ಜಿಲ್ಲಾಡಳಿತದಿಂದ ಮಹಾನಗರ ಪಾಲಿಕೆ ಆವರಣದಲ್ಲಿ ಟಗರು ಮತ್ತು ಹೋತಗಳ ಪ್ರದರ್ಶನ ಆಯೋಜಿಸಲಾಗಿತ್ತು. ಸಚಿವ ಕೆ.ಎಂ.ಶಿವಲಿಂಗೇಗೌಡ, ಲತಾಕುಮಾರಿ, ಡಾ.ಎಲ್.ಹನುಮೇಗೌಡ ಇದ್ದರು.
Published on: 

ಹಾಸನ: ಶ್ರೀ ಹಾಸನಾಂಬ ದೇವಿ ಹಾಗೂ ಶ್ರೀ ಸಿದ್ಧೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತದಿಂದ ಮಹಾನಗರ ಪಾಲಿಕೆ ಆವರಣದಲ್ಲಿ ಟಗರು ಮತ್ತು ಹೋತಗಳ ಪ್ರದರ್ಶನ ಆಯೋಜಿಸಲಾಗಿತ್ತು.

ಅಬಕಾರಿ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ವಿವಿಧ ತಳಿಗಳ ಟಗರು ಮತ್ತು ಹೋತಗಳನ್ನು ಸಾಕಿ, ಸಂರಕ್ಷಿಸಿ ನಮ್ಮ ನಾಡಿನಲ್ಲಿ ಉಳಿಸುವುದರಲ್ಲಿ ರೈತರು ಪ್ರಮುಖ ಪಾತ್ರವಹಿಸಿದ್ದಾರೆ ಎಂದು ತಿಳಿಸಿದರು. ಪ್ರದರ್ಶನದಲ್ಲಿರುವ ಕುರಿ-ಮೇಕೆಗಳು ಆಕರ್ಷಣೀಯವಾಗಿವೆ ಎಂದ ಸಚಿವರು ಭಾಗವಹಿಸಿದ್ದ ಎಲ್ಲ ಟಗರು ಹಾಗೂ ಹೋತಗಳ ಮಾಲೀಕರಿಗೆ 2 ಸಾವಿರ ರೂ.ಗಳ ಪ್ರೋತ್ಸಾಹ ಧನ ನೀಡಿ ಗೌರವಿಸಿದರು.

ವಿವಿಧ ತಳಿಯ ಕುರಿ, ಮೇಕೆಗಳು, ದೇಶಿ ತಳಿಗಳ ಸಂರಕ್ಷಣೆ ಪರಿಚಯಿಸುವ ಉದ್ದೇಶದಿಂದ ಪ್ರದರ್ಶನ ಆಯೋಜಿಸಲಾಗಿತ್ತು. ವಿವಿಧ ಭಾಗಗಳಿಂದ ಉತ್ತಮ ತಳಿಗಳ ಟಗರು ಮತ್ತು ಹೋತಗಳು ಭಾಗವಹಿಸಿದ್ದವು. ಅವುಗಳ ಮೈಕಟ್ಟು ಹಾಗೂ ತಳಿ-ನಿರ್ದಿಷ್ಟ ಗುಣಲಕ್ಷಣಗಳನ್ನು ಆಧರಿಸಿ ಉತ್ತಮ ಜೋಡಿಗಳನ್ನು ಆಯ್ಕೆ ಮಾಡಲಾಯಿತು. ಪ್ರತಿ ತಳಿಯಲ್ಲೂ ಮಾಲೀಕರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಜಿಲ್ಲಾಧಿಕಾರಿ ಲತಾಕುಮಾರಿ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಎಲ್.ಹನುಮೇಗೌಡ ಮತ್ತಿತರರು ಭಾಗವಹಿಸಿದ್ದರು.