

ಹಾಸನ: ಜೀವನದಲ್ಲಿ ಎದುರಾಗುವ ಆರಂಭಿಕ ಸೋಲುಗಳಿಗೆ ಎದೆಗುಂದದೆ, ಆತ್ಮವಿಶ್ವಾಸ, ಶ್ರದ್ಧೆ ಹಾಗೂ ನಿರಂತರ ಪ್ರಯತ್ನದ ಮೂಲಕ ಯಶಸ್ಸಿನ ಗುರಿ ತಲುಪಬೇಕು ಎಂದು ಇನ್ಫೋಸಿಸ್ ಸಂಸ್ಥೆಯ ಹಿರಿಯ ಪ್ರಧಾನ ಸಲಹೆಗಾರರಾದ ಸಹನಾ ಕುವಾರಸ್ವಾಮಿ ವಿದ್ಯಾರ್ಥಿಗಳಿಗೆ ಕಿವಿವಾತು ಹೇಳಿದರು.
ನಗರದ ನವ್ಕೀಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಂಸಿಎ ಸ್ನಾತಕೋತ್ತರ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ತಮ್ಮ ವತ್ತಿಜೀವನದ ಅನುಭವಗಳನ್ನು ಹಂಚಿಕೊಂಡ ಅವರು, ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದರೂ ಉದ್ಯೋಗದ ಮೊದಲ ಎರಡು ಸಂದರ್ಶನಗಳಲ್ಲಿ ವಿಫಲಳಾಗಿದ್ದೆ. ಆದರೆ, ಆ ಸೋಲುಗಳಿಂದ ಧೃತಿಗೆಡದೆ ತಪ್ಪುಗಳನ್ನು ಸರಿಪಡಿಸಿಕೊಂಡು ಮೂರನೇ ಸಂದರ್ಶನದಲ್ಲಿ ಯಶಸ್ಸು ಸಾಧಿಸಿದೆ. ನಂತರ ಆರು ವರ್ಷಗಳ ಕಾಲ ಬೋಧನಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ಅನುಭವಗಳಿಸಿದ ಬಳಿಕ ಇನ್ಫೋಸಿಸ್ ಸಂಸ್ಥೆಯಲ್ಲಿ ಉದ್ಯೋಗಾವಕಾಶ ಪಡೆದುಕೊಂಡೆ ಎಂದರು.
ಅಂಕಗಳು, ಪದವಿಗಳಷ್ಟೇ ಯಶಸ್ಸಿನ ವಾನದಂಡಗಳಲ್ಲ. ಕಲಿಯುವ ಆಸಕ್ತಿ, ಕೌಶಲಗಳ ನಿರಂತರ ಅಭಿವೃದ್ಧಿ, ಸಮಯಪ್ರಜ್ಞೆ ಹಾಗೂ ಸವಾಲುಗಳನ್ನು ಎದುರಿಸುವ ಮನೋಭಾವ ಅಷ್ಟೇ ಮುಖ್ಯ. ಒಂದು ಪ್ರಯತ್ನದಲ್ಲಿ ಸೋತರೆ ಗುರಿಯನ್ನು ಬದಲಿಸಬೇಡಿ. ಪ್ರಯತ್ನದ ವಿಧಾನವನ್ನು ಬದಲಿಸಿಕೊಳ್ಳಿ. ಸೋಲುಗಳು ಯಶಸ್ಸಿನ ಮೆಟ್ಟಿಲುಗಳಾಗಬೇಕು. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟು ನಿರಂತರವಾಗಿ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಡಾ.ಸಂಜಯ್ ಪಾಂಡೆ, ಎಂಸಿಎ ವಿಭಾಗದ ಮುಖ್ಯಸ್ಥ ವರದರಾಜ್, ಉಪನ್ಯಾಸಕರು, ಪ್ರಥಮ ವರ್ಷದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.