ಗುರು ತೋರಿಸಿದ ಮಾರ್ಗದಲ್ಲಿ ಸಾಗಿ

ವಿದ್ಯಾರ್ಥಿಗಳಿಗೆ ಕೆ.ಎನ್.ರವಿಕುಮಾರ ಕಿವಿಮಾತು
ಅರಕಲಗೂಡು ತಾಲೂಕಿನ ಹನ್ಯಾಳು ಸರ್ಕಾರಿ ಪ್ರೌಢಶಾಲೆಯಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಿಕ್ಷಕಿ ಗೀತಾ, ಶಿಕ್ಷಕಿ ಸುಬ್ಬಲಕ್ಷ್ಮೀ, ಶಿಕ್ಷಕರಾದ ಕುಮಾರ್, ಮೇಘನಾ, ಸ್ವಾತಿ ಮತ್ತು ವಿದ್ಯಾರ್ಥಿಗಳು ಇದ್ದರು.
ಅರಕಲಗೂಡು ತಾಲೂಕಿನ ಹನ್ಯಾಳು ಸರ್ಕಾರಿ ಪ್ರೌಢಶಾಲೆಯಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಿಕ್ಷಕಿ ಗೀತಾ, ಶಿಕ್ಷಕಿ ಸುಬ್ಬಲಕ್ಷ್ಮೀ, ಶಿಕ್ಷಕರಾದ ಕುಮಾರ್, ಮೇಘನಾ, ಸ್ವಾತಿ ಮತ್ತು ವಿದ್ಯಾರ್ಥಿಗಳು ಇದ್ದರು.
Published on: 

ಅರಕಲಗೂಡು: ಸತ್ಯ, ಅಹಿಂಸೆ, ಸರಳತೆ, ಸೇವೆ ಹಾಗೂ ದೇಶಭಕ್ತಿಯ ಮೌಲ್ಯಗಳನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡು ದೇಶಕ್ಕೆ ಸ್ವಾತಂತ್ರೃ ತಂದುಕೊಟ್ಟ ಮಹಾತ್ಮ ಗಾಂಧಿ ಮತ್ತು ಲಾಲ್ ಬಹಾದೂರ್ ಶಾಸ್ತ್ರಿ ಅವರ ನಡೆ-ನುಡಿಗಳು ಇಂದಿನ ವಿದ್ಯಾರ್ಥಿಗಳಿಗೆ ದಾರಿದೀಪವಾಗಬೇಕು ಎಂದು ಜಿಲ್ಲಾ ಅತ್ಯುತ್ತಮ ಪ್ರೌಢಶಾಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಎನ್.ರವಿಕುಮಾರ ಹೇಳಿದರು.

ತಾಲೂಕಿನ ಹನ್ಯಾಳು ಗ್ರಾಮದ ದಿ.ಗೌರಮ್ಮ ಪುಟ್ಟಸ್ವಾಮಪ್ಪ ಸ್ಮಾರಕ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿರಿಯರು ಹಾಗೂ ಗುರುಗಳು ತೋರಿಸಿಕೊಟ್ಟ ಉತ್ತಮ ಮಾರ್ಗದಲ್ಲಿ ಇಂದಿನ ಯುವಜನತೆ ಸಾಗಬೇಕು. ರಾಜಕೋಟೆಯ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಗಾಂಧಿ ಶಾಲೆಗೆ ಭೇಟಿ ನೀಡಿದ್ದ ಅಧಿಕಾರಿಯೊಬ್ಬರು ಆಂಗ್ಲ ಭಾಷೆಯ ಕೆಟಲ್ ಪದ ಬರೆಯುವಂತೆ ಸೂಚಿಸಿದ್ದರು. ಗಾಂಧಿ ತಪ್ಪಾಗಿ ಬರೆದಿದ್ದಾಗ, ಪಕ್ಕದ ವಿದ್ಯಾರ್ಥಿ ಬರೆದಿದ್ದನ್ನು ನೋಡಿ ಸರಿಪಡಿಸಿಕೊಳ್ಳುವಂತೆ ಶಿಕ್ಷಕರು ಸೂಚಿಸಿದರೂ ಅವರು ನಯವಾಗಿ ತಿರಸ್ಕರಿಸಿದ್ದರು. ಪ್ರಾಮಾಣಿಕತೆ ಮತ್ತು ಸ್ವಂತ ಪರಿಶ್ರಮಕ್ಕೆ ಅವರು ನೀಡಿದ ಮಹತ್ವ ಇದರಿಂದ ತಿಳಿಯುತ್ತದೆ. ಇಂತಹ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಸ್ವಚ್ಛತಾ ಅಭಿಯಾನದಡಿ ಶಾಲಾ ಆವರಣದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಇದೇ ವೇಳೆ ತಾಯಿಯ ಹೆಸರಿನಲ್ಲಿ ಗಿಡ ಅಭಿಯಾನದಡಿ ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು.

ಕಾರ್ಯಕ್ರಮದಲ್ಲಿ ಶಿಕ್ಷಕಿ ಗೀತಾ, ಶಿಕ್ಷಕಿ ಸುಬ್ಬಲಕ್ಷ್ಮೀ, ಶಿಕ್ಷಕರಾದ ಕುಮಾರ್, ಮೇಘನಾ, ಸ್ವಾತಿ ಮತ್ತು ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net