ಕನ್ನಡಕ್ಕೆ ಕೊಡುಗೆ ನೀಡಿದವರ ಸ್ಮರಣೆ ಅಗತ್ಯ

ಮೌಂಟ್ ಕಾರ್ಮೆಲ್ ಶಾಲೆಯ ಫಾದರ್ ಜೋಸೆಫ್ ಪಿಂಟೋ ಅಭಿಪ್ರಾಯ
belruu kannada rajyostava mount carmel school
ಬೇಲೂರು ಪಟ್ಟಣದ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬಿ.ಆರ್.ತೀರ್ಥಂಕರ್ ಅವರನ್ನು ಸನ್ಮಾನಿಸಲಾಯಿತು. ಫಾದರ್ ಜೋಸೆಫ್ ಪಿಂಟೋ, ಫಾದರ್ ಅಂತೋನ್ ಸೋಜ್, ಗೀತಾ ಇತರರಿದ್ದರು.
Published on: 

ಬೇಲೂರು: ನಾಡು-ನುಡಿ, ನೆಲ-ಜಲ ಹಾಗೂ ಸಂಸ್ಕೃತಿಯ ಉಳಿವಿಗಾಗಿ ನಿರಂತರ ಶ್ರಮಿಸುತ್ತಿರುವ ಕನ್ನಡಪರ ಹೋರಾಟಗಾರರನ್ನು ಗುರುತಿಸಿ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಮೌಂಟ್ ಕಾರ್ಮೆಲ್ ಶಾಲೆಯ ಫಾದರ್ ಜೋಸೆಫ್ ಪಿಂಟೋ ಹೇಳಿದರು.

ಪಟ್ಟಣದ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ಕನ್ನಡಪರ ಹೋರಾಟಗಾರ ಬಿ.ಆರ್.ತೀರ್ಥಂಕರ್ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡವನ್ನು ನಾಡಿನ ಪ್ರತಿಯೊಬ್ಬರೂ ಗೌರವಿಸಬೇಕು. ಅಲ್ಲದೆ, ನಮ್ಮ ತಾಲೂಕಿನಲ್ಲೇ ಕನ್ನಡದ ಪ್ರಥಮ ಶಿಲಾಶಾಸನ ದೊರೆತಿರುವುದು ಹೆಮ್ಮೆ. ಶಾಲೆಯಲ್ಲಿ ಮಕ್ಕಳಿಗೆ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿವರ್ಷ ಕನ್ನಡ ರಾಜ್ಯೋತ್ಸವದ ಸಂದರ್ಭ ನಾಡು, ನುಡಿ, ಭಾಷೆ ಮತ್ತು ಸಂಸ್ಕೃತಿಗೆ ಕೊಡುಗೆ ನೀಡಿದವರನ್ನು ಸನ್ಮಾನಿಸಲಾಗುತ್ತಿದೆ ಎಂದರು.

ಪ್ರಾಂಶುಪಾಲ ಫಾದರ್ ಅಂತೋನ್ ಸೋಜ್, ಶಿಕ್ಷಕಿ ಗೀತಾ, ವಿದ್ಯಾರ್ಥಿಗಳಿದ್ದರು.