

ಹಾಸನ: ಹಾಲಿನ ದರ ಏರಿಕೆಯಿಂದ ಹಾಸನ ಹಾಲು ಒಕ್ಕೂಟಕ್ಕೆ ಪ್ರತಿ ತಿಂಗಳು ಸುಮಾರು 8.50 ಕೋಟಿ ರೂ.ನಷ್ಟವಾಗುತ್ತಿದೆ. ಈ ನಷ್ಟವನ್ನು ಹೇಗೆ ಸರಿದೂಗಿಸಬೇಕು ಎಂಬುದನ್ನು ಸರ್ಕಾರವೇ ತಿಳಿಸಬೇಕು ಎಂದು ಹಾಸನ ಹಾಲು ಒಕ್ಕೂಟದ ಅಧ್ಯಕ್ಷರೂ ಆದ ಶಾಸಕ ಎಚ್.ಡಿ.ರೇವಣ್ಣ ಹೇಳಿದರು.
ಹಾಸನ ಹಾಲು ಒಕ್ಕೂಟದಲ್ಲಿ ಪ್ರತಿದಿನ ನಾಲ್ಕರಿಂದ ಐದು ಲಕ್ಷ ಲೀಟರ್ ಹಾಲು ಕನ್ವರ್ಷನ್ಗೆ ಹೋಗುತ್ತಿದೆ. ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಸೂಚನೆ ಹಿನ್ನೆಲೆಯಲ್ಲಿ ಹಾಲಿನ ಬೆಲೆ ಏರಿಕೆ ಕುರಿತು ಬೋರ್ಡ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಒಂದೇ ಬಾರಿಗೆ 8 ರೂ.ಹಾಲಿನ ಬೆಲೆ ಏರಿಸಿದರೆ ಗ್ರಾಹಕರ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ. ಗ್ರಾಹಕರು, ಹಾಲು ಉತ್ಪಾದಕರು ಹಾಗೂ ಒಕ್ಕೂಟದ ಹಿತವನ್ನು ಸಮತೋಲನದಲ್ಲಿ ಕಾಯಬೇಕಿದೆ. ಖಾಸಗಿ ಹಾಲು ಕಂಪನಿಗಳ ಪೈಪೋಟಿಯನ್ನು ಎದುರಿಸಬೇಕಾಗಿದೆ ಎಂದು ತಿಳಿಸಿದರು.
ಅಮೂಲ್ ಸಂಸ್ಥೆ ರಾಜ್ಯಾದ್ಯಂತ ಹಾಲು ಮಾರಾಟ ಮಾಡುತ್ತಿದೆ. ಅವರ ಯುಎಚ್ಟಿ ಹಾಲಿನ ಬೆಲೆ ಲೀಟರ್ಗೆ 70 ರೂ.ಇದೆ. ನಾವು 72ಕ್ಕೆ ಮಾರಾಟ ಮಾಡಿದರೆ ಗ್ರಾಹಕರು ಯಾವ ಹಾಲನ್ನು ಖರೀದಿಸುತ್ತಾರೆ? ಅಮೂಲ್ ತುಪ್ಪ 720 ರೂ.ಇದ್ದರೆ, ನಂದಿನಿ ತುಪ್ಪದ ಬೆಲೆ 860 ರೂ.ನಿಗದಿಪಡಿಸಿದಾಗ ಗ್ರಾಹಕರು ಯಾರ ಉತ್ಪನ್ನ ಖರೀದಿಸುತ್ತಾರೆ? ಎಂದು ಪ್ರಶ್ನಿಸಿದರು.
ಗ್ರಾಹಕರನ್ನು ಕಳೆದುಕೊಂಡರೆ ಹಾಲು ಒಕ್ಕೂಟದ ಭವಿಷ್ಯವೇನು? ಈ ವಿಚಾರವನ್ನು ಮುಖ್ಯಮಂತ್ರಿಗಳಿಗೆ ಅರ್ಥ ಮಾಡಿಸಬೇಕಿದೆ. ಅವರು ಬೇರೆ ಬೇರೆ ವಿಚಾರಗಳಲ್ಲಿ ಕಾರ್ಯನಿರತರಾಗಿರುವುದರಿಂದ ಈ ಬಗ್ಗೆ ಮನವರಿಕೆ ಮಾಡುವುದು ನಮ್ಮ ಜವಾಬ್ದಾರಿ ಎಂದರು.
ಮೊಸರಿನ ದರವನ್ನು ಇಳಿಸಬೇಕು ಎಂಬುದು ನನ್ನ ಆಗ್ರಹ. ಹಾಲಿನ ದರವನ್ನು ಕನಿಷ್ಠ 10 ರೂ.ಏರಿಸಿದರೆ ಸೂಕ್ತ ಎಂಬುದು ನನ್ನ ಅಭಿಪ್ರಾಯ. ಎಂದರು.
ಅಮೂಲ್ ಸಂಸ್ಥೆ ರಾಜ್ಯಾದ್ಯಂತ ಹಾಲು ಮಾರಾಟ ಮಾಡುತ್ತಿದೆ. ಅವರ ಯುಎಚ್ಟಿ ಹಾಲಿನ ಬೆಲೆ ಲೀಟರ್ಗೆ 70 ರೂ.ಇದೆ. ನಾವು 72ಕ್ಕೆ ಮಾರಾಟ ಮಾಡಿದರೆ ಗ್ರಾಹಕರು ಯಾವ ಹಾಲು ಖರೀದಿಸುತ್ತಾರೆ? ಅಮೂಲ್ ತುಪ್ಪ ಕೆ.ಜಿ. 720 ರೂ.ಇದ್ದರೆ, ನಂದಿನಿ 860 ರೂ.ಹಾಗಾದರೆ ಗ್ರಾಹಕರು ಯಾರ ಉತ್ಪನ್ನ ಖರೀದಿಸುತ್ತಾರೆ?