ಅಪರಾಧ ತಡೆಗೆ ಕಾನೂನು ಅರಿವು ಅವಶ್ಯ

ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಎಚ್.ಪಿ ಸಂದೇಶ ಅಭಿಪ್ರಾಯ
ತಾಲೂಕಿನ ಬಿಕ್ಕೋಡು ರಸ್ತೆಯಲ್ಲಿರುವ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ನೂತನ ಹಿರಿಯ ಸಿವಿಲ್ ನ್ಯಾಯಾಧೀಶ ಪೀಠವನ್ನು ನ್ಯಾಯಮೂರ್ತಿ ಎಚ್.ಪಿ ಸಂದೇಶ ಉದ್ಘಾಟಿಸಿದರು. ಶಾಸಕ ಸಿಮೆಂಟ್ ಮಂಜು,  ಜಿಲ್ಲಾ ನ್ಯಾಯಾಧೀಶರಾದ ಹೇಮಾವತಿ, ಎಂ.ಸ್ನೇಹಾ, ಅಶೋಕ್ ಎಸ್. ಕಿಣಗಿ ಇತರರು ಇದ್ದರು.
ತಾಲೂಕಿನ ಬಿಕ್ಕೋಡು ರಸ್ತೆಯಲ್ಲಿರುವ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ನೂತನ ಹಿರಿಯ ಸಿವಿಲ್ ನ್ಯಾಯಾಧೀಶ ಪೀಠವನ್ನು ನ್ಯಾಯಮೂರ್ತಿ ಎಚ್.ಪಿ ಸಂದೇಶ ಉದ್ಘಾಟಿಸಿದರು. ಶಾಸಕ ಸಿಮೆಂಟ್ ಮಂಜು, ಜಿಲ್ಲಾ ನ್ಯಾಯಾಧೀಶರಾದ ಹೇಮಾವತಿ, ಎಂ.ಸ್ನೇಹಾ, ಅಶೋಕ್ ಎಸ್. ಕಿಣಗಿ ಇತರರು ಇದ್ದರು.
Published on: 

ಆಲೂರು: ಸಮಾಜದಲ್ಲಿ ಪ್ರತಿಯೊಬ್ಬರೂ ಕಾನೂನು ಬಗ್ಗೆ ಅರಿತಾಗ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತದೆ ಮತ್ತು ಸರ್ಕಾರಿ ಸೌಲಭ್ಯ ಪಡೆದುಕೊಳ್ಳವುದು ಹೇಗೆ ಎಂಬುದು ಸರಳವಾಗಿ ತಿಳಿಯುತ್ತದೆ ಎಂದು ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಎಚ್.ಪಿ ಸಂದೇಶ ಹೇಳಿದರು.

ತಾಲೂಕಿನ ಬಿಕ್ಕೋಡು ರಸ್ತೆಯಲ್ಲಿರುವ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ನೂತನ ಹಿರಿಯ ಸಿವಿಲ್ ನ್ಯಾಯಾಧೀಶ ಪೀಠವನ್ನು ಉದ್ಘಾಟಿಸಿ ಮಾತನಾಡಿದರು.

ಆಲೂರು ತಾಲೂಕಿನ ಜನರು ಹಾಗೂ ವಕೀಲರ ಸಂಘವು ದೀರ್ಘಕಾಲದಿಂದ ಹಿರಿಯ ಸಿವಿಲ್ ನ್ಯಾಯಾಧೀಶರ ಪೀಠಕ್ಕಾಗಿ ಬೇಡಿಕೆ ಇಟ್ಟಿದ್ದರು. ನೂತನ ಪೀಠದ ಆರಂಭದಿಂದ ಸ್ಥಳೀಯರು ಮತ್ತು ವ್ಯಾಜ್ಯದಾರರು ಸಣ್ಣಪುಟ್ಟ ಅಥವಾ ಗಂಭೀರ ಸ್ವರೂಪದ ಸಿವಿಲ್ ಹಾಗೂ ಇತರೆ ಪ್ರಕರಣಗಳ ವಿಚಾರಣೆಗಾಗಿ ಜಿಲ್ಲಾ ಕೇಂದ್ರಕ್ಕೆ ಅಲೆಯುವ ಕಷ್ಟ ತಪ್ಪಲಿದೆ. ನ್ಯಾಯಾಂಗ ಸೇವೆಯು ಜನರ ಮನೆ ಬಾಗಿಲಿಗೆ ಮತ್ತಷ್ಟು ಹತ್ತಿರವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಶಾಸಕ ಸಿಮೆಂಟ್ ಮಂಜು ಮಾತನಾಡಿ, ನ್ಯಾಯಾಲಯಗಳು ಬಡವರ ಮತ್ತು ನೊಂದವರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತವೆ ಎಂಬುದು ಪ್ರಜಾಪ್ರಭುತ್ವದ ಅತ್ಯಂತ ಪವಿತ್ರವಾದ ನಂಬಿಕೆಯಾಗಿದೆ. ಆಲೂರು ತಾಲೂಕಿನಲ್ಲಿ 27 ವರ್ಷಗಳ ಬಳಿಕ ಈ ಕನಸು ನನಸಾಗಿದೆ, ಸಾರ್ವಜನಿಕರು ಮತ್ತು ವಕೀಲರು ಸಣ್ಣಪುಟ್ಟ ಸಿವಿಲ್ ವ್ಯಾಜ್ಯಗಳಿಗೂ ಅಥವಾ ಹಿರಿಯ ನ್ಯಾಯಾಲಯದ ವಿಚಾರಣೆಗಾಗಿ ಹಾಸನ ಜಿಲ್ಲಾ ಕೇಂದ್ರಕ್ಕೆ ಅಲೆಯಬೇಕಾದ ಅನಿವಾರ್ಯತೆ ಇತ್ತು. ಇವತ್ತು ತಾಲೂಕಿನ ಜನತೆಯ ಬಹುದಿನಗಳ ಮಹತ್ವದ ಬೇಡಿಕೆ ಈಡೇರಿದೆ. ಇದರಿಂದ ನ್ಯಾಯಾಂಗ ಸೇವೆಯು ಜನರ ಮನೆ ಬಾಗಿಲಿಗೆ ಮತ್ತಷ್ಟು ಹತ್ತಿರವಾಗಲಿದೆ ಎಂದು ಅಭಿಪ್ರಾಯಪಟ್ಟರು.

ವಕೀಲರ ಸಂಘದ ಅಧ್ಯಕ್ಷ ಎಂ.ಎಸ್ ಮಹೇಶ್, ಜಿಲ್ಲಾ ನ್ಯಾಯಾಧೀಶರಾದ ಹೇಮಾವತಿ, ಎಂ.ಸ್ನೇಹಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net