ಅಂತಾರಾಜ್ಯ ಸರಗಳ್ಳರ ಬಂಧನ

ಸಿನಿಮೀಯಾ ಮಾದರಿ ಪೊಲೀಸರು ಕಾರ್ಯಾಚರಣೆ
ಅಸ್ಸಾಂ ಮೂಲದ ಸರಗಳ್ಳರ
ಅಸ್ಸಾಂ ಮೂಲದ ಗಾಜಿಬುರ್ ರೆಹಮಾನ್, ರಾಬಿಕುಲ್ ಇಸ್ಲಾಂ ಬಂಧಿತರು.
Published on: 

ಸಕಲೇಶಪುರ: ಅಂತಾರಾಜ್ಯ ಸರಗಳ್ಳರನ್ನು ಮಂಗಳವಾರ ಪಟ್ಟಣ ಪೊಲೀಸರು ಸಿನಿಮೀಯಾ ಮಾದರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಅಸ್ಸಾಂ ಮೂಲದ ಗಾಜಿಬುರ್ ರೆಹಮಾನ್, ರಾಬಿಕುಲ್ ಇಸ್ಲಾಂ ಬಂಧಿತರು. ಆರೋಪಿಗಳು ಬೇಲೂರು ತಾಲೂಕು ಅರೆಹಳ್ಳಿ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ವಾರದ ಹಿಂದೆ ಪಟ್ಟಣದ ಬ್ರಾಹ್ಮಣರ ಬೀದಿಯಲ್ಲಿ ತೆರಳುತ್ತಿದ ರಾಣಿ ಎಂಬುವವರ ಚಿನ್ನದ ಸರವನ್ನು ಬೈಕ್‌ನಲ್ಲಿ ಬಂದಿದ್ದ ಇಬ್ಬರು ಕಿತ್ತು ಪರಾರಿಯಾಗಿದ್ದರು. ಕಳ್ಳರ ಜಾಡು ಭೇದಿಸಿದ ಪೋಲಿಸರು ಮಂಗಳವಾರ ಪಟ್ಟಣಕ್ಕೆ ಆಗಮಿಸುತ್ತಿರುವುದನ್ನು ಪತ್ತೆ ಹಚ್ಚಿ ಪಟ್ಟಣದಾದ್ಯಂತ ನಾಕಾಬಂದಿ ಹಾಕಿದ್ದರು. ಪಟ್ಟಣ ಪ್ರವೇಶಿಸುತ್ತಿದ್ದಂತೆ ಪೊಲೀಸರು ಬೈಕ್ ಬೆನ್ನಟ್ಟಿದರು. ಇದರಿಂದ ಗಾಬರಿಯಾದ ಕಳ್ಳರು ವೇಗವಾಗಿ ಹಳೆಯ ಬಸ್ ನಿಲ್ದಾಣದೆಡೆಗೆ ಬೈಕ್ ಚಲಾಯಿಸಿದರು. ಇವರನ್ನು ತಡೆಯಲು ಪೊಲೀಸರ ಕಾರುಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದೆ. ಈ ವೇಳೆ ತಪ್ಪಿಸಿಕೊಳ್ಳುವ ಭರದಲ್ಲಿ ಕಾರಿಗೆ ಡಿಕ್ಕಿ ಹೊಡೆದು ನೆಲಕ್ಕೆ ಬಿದ್ದಿದ್ದಾರೆ.

ಒಬ್ಬ ಆರೋಪಿ ಸ್ಥಳದಲ್ಲೇ ಸಿಕ್ಕಿ ಬಿದ್ದರೆ ಮತ್ತೊಬ್ಬ ಪರಾರಿಯಾಗಿದ್ದ. ಪರಾರಿಯಾಗಿದ್ದ ಆರೋಪಿ ಬಟ್ಟೆ ಬದಲಿಸಿ ಘಟನಾ ಸ್ಥಳಕ್ಕೆ ಆಗಮಿಸಿ ಅಮಾಯಕನಂತೆ ನಾಟಕವಾಡುತ್ತಿದ್ದ. ವೃತ್ತ ನಿರೀಕ್ಷಿಕ ವನರಾಜು ಆರೋಪಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದರು. ಇಬ್ಬರು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net