ಜಾರ್ಖಂಡ್‌ನಲ್ಲಿ ಕಂಟೈನರ್ ಚಾಲಕನಾಗಿದ್ದ ಯಶವಂತ್ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ಸಾಧ್ಯವಾಗದೆ ಪಾಲಕರು ಸಂಕಷ್ಟಕ್ಕೆ ಸಿಲುಕಿದ್ದರು. ಈ ವಿಷಯವನ್ನು ಗ್ರಾಮಸ್ಥರು ಶಾಸಕ ಎಚ್.ಡಿ.ರೇವಣ್ಣ ಅವರ ಗಮನಕ್ಕೆ ತಂದಿದ್ದಾರೆ. ಮಾಹಿತಿ ತಿಳಿದ ತಕ್ಷಣವೇ ಸ್ಪಂದಿಸಿದ ಶಾಸಕರು, ಸಹೋದರ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮೊಬೈಲ್‌ನಲ್ಲಿ ಪರಿಸ್ಥಿತಿಯ ನ್ನು ವಿವರಿಸಿದ್ದಾರೆ. ಸಮಸ್ಯೆಗೆ ಸ್ಪಂದಿಸಿದ ಎಚ್.ಡಿ.ಕುಮಾರಸ್ವಾಮಿ ಅವರು ಮೃತ ಚಾಲಕನ ಪಾಲಕರಿಗೆ ಕರೆ ಮಾಡಿ ಸಾಂತ್ವನ ಹೇಳಿದರು. ಜಾಖರ್ಂಡ್‌ನಿಂದ ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ಅಗತ್ಯ ವ್ಯವಸ್ಥೆ ಮಾಡುವುದಾಗಿ ತಿಳಿಸಿ, ಅದರಂತೆ ಸೋಮವಾರ ಮೃತದೇಹವು ಸ್ವಗ್ರಾಮಕ್ಕೆ ಆಗಮಿಸಿತು. ನಂತರ ಅಂತ್ಯಕ್ರಿಯೆ ನಡೆಯಿತು. ಮೃತರಿಗೆ ತಂದೆ, ತಾಯಿ, ಸಹೋದರಿ ಇದ್ದಾರೆ.