ಮಾನಸಿಕ ಕ್ಷೇಮಕ್ಕೆ ಯೋಗ ಪ್ರಬಲ ಸಾಧನ

ಆಲೂರಿನ ಬಿಕ್ಕೋಡು ರಸ್ತೆಯಲ್ಲಿರುವ ಜೆಎಂಎಫ್‌ಸಿ ನ್ಯಾಯಾಲಯ ಆವರಣದಲ್ಲಿ ಎಂ.ಸ್ನೇಹಾ ಸೇರಿದಂತೆ ಇತರ ಗಣ್ಯರು ಯೋಗಾಭ್ಯಾಸ ಮಾಡಿದರು.
ಆಲೂರಿನ ಬಿಕ್ಕೋಡು ರಸ್ತೆಯಲ್ಲಿರುವ ಜೆಎಂಎಫ್‌ಸಿ ನ್ಯಾಯಾಲಯ ಆವರಣದಲ್ಲಿ ಎಂ.ಸ್ನೇಹಾ ಸೇರಿದಂತೆ ಇತರ ಗಣ್ಯರು ಯೋಗಾಭ್ಯಾಸ ಮಾಡಿದರು.
Published on
ಆಲೂರು: ಯೋಗ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ ಎಂದು ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯೆ ಎಂ.ಸ್ನೇಹಾ ತಿಳಿಸಿದರು.
ಬಿಕ್ಕೋಡು ರಸ್ತೆಯಲ್ಲಿರುವ ಜೆಎಂಎಫ್‌ಸಿ ನ್ಯಾಯಾಲಯ ಆಭರಣದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಅಂತಾರಾಷ್ಟ್ರೀಯ ಯೋಗ ದಿನ ಉದ್ಘಾಟಿಸಿ ಮಾತನಾಡಿದ ಅವರು, ಏಕಾಗ್ರತೆಯನ್ನು ಹೆಚ್ಚಿಸಲು, ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಯೋಗ ಸಹಾಯ ಮಾಡುತ್ತದೆ. ಒತ್ತಡ ನಿವಾರಣೆಯಲ್ಲೂ ಯೋಗ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಯೋಗಾಭ್ಯಾಸ ದೇಹವನ್ನು ಎಚ್ಚರಗೊಳಿಸುವುದರ ಜತೆಗೆ ದಿನಪೂರ್ತಿ ಚಟುವಟಿಕೆ, ಉತ್ಸಾಹದಿಂದಿರಲು ಸಹಕರಿಸುತ್ತದೆ. ಯೋಗವು ಮಾನಸಿಕ ಯೋಗಕ್ಷೇಮವನ್ನು ಸುಧಾರಿಸಲು ಪ್ರಬಲ ಸಾಧನವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ.ಎಸ್.ಮಹೇಶ್, ವಕೀಲರಾದ ಮಂಜೇಗೌಡ, ನ್ಯಾಯಾಂಗ ಇಲಾಖೆ ನೌಕರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net