ಸಮಾಜ ಸುಧಾರಣೆಗೆ ಬರವಣಿಗೆ ನೆರವು

ಹೊಳೆನರಸೀಪುರ ಪಟ್ಟಣದ ಶಿಕ್ಷಕರ ಭವನದಲ್ಲಿ  ದಲಿತ ಸಾಹಿತ್ಯ ಪರಿಷತ್‌ನ ತಾಲೂಕು ಘಟಕದ ಪದಗ್ರಹಣ ಸಮಾರಂಭ ಜರುಗಿತು.  ಸುಬ್ಬು ಹೊಲೆಯಾರ್, ಡಾ. ಅರ್ಜುನ್ ಗೋಳಸಂಗಿ,  ಹೆತ್ತೂರ್ ನಾಗರಾಜ್, ಡಿ.ಕೆ.ವಸಂತಯ್ಯ, ಡಿ.ಕೆ. ಕುಮಾರಯ್ಯ, ಎಚ್.ಟಿ.ಲಕ್ಷ್ಮಣ್ ಇತರರು ಇದ್ದರು.
ಹೊಳೆನರಸೀಪುರ ಪಟ್ಟಣದ ಶಿಕ್ಷಕರ ಭವನದಲ್ಲಿ ದಲಿತ ಸಾಹಿತ್ಯ ಪರಿಷತ್‌ನ ತಾಲೂಕು ಘಟಕದ ಪದಗ್ರಹಣ ಸಮಾರಂಭ ಜರುಗಿತು. ಸುಬ್ಬು ಹೊಲೆಯಾರ್, ಡಾ. ಅರ್ಜುನ್ ಗೋಳಸಂಗಿ, ಹೆತ್ತೂರ್ ನಾಗರಾಜ್, ಡಿ.ಕೆ.ವಸಂತಯ್ಯ, ಡಿ.ಕೆ. ಕುಮಾರಯ್ಯ, ಎಚ್.ಟಿ.ಲಕ್ಷ್ಮಣ್ ಇತರರು ಇದ್ದರು.
Published on
ಹೊಳೆನರಸೀಪುರ: ಸಮಾನ ಯೋಚನೆ ಇಲ್ಲದಿದ್ದರೆ ಯಾವುದೇ ಉಪನ್ಯಾಸಕ್ಕೂ ಅರ್ಥವಿಲ್ಲ ಎಂದು ಸಾಹಿತಿ ಹಾಗು ಕನ್ನಡ ರಾಜ್ಯೋತ್ಸವ ಪುರಸ್ಕೃತ ಸುಬ್ಬು ಹೊಲೆಯಾರ್ ಅಭಿಪ್ರಾಯಪಟ್ಟರು.

ಭಾನುವಾರ ಪಟ್ಟಣದ ಶಿಕ್ಷಕರ ಭವನದಲ್ಲಿ ನಡೆದ ದಲಿತ ಸಾಹಿತ್ಯ ಪರಿಷತ್‌ನ ತಾಲೂಕು ಘಟಕದ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಮಾನತೆಯ ಸಂಸ್ಕಾರವೇ ನಿಜವಾದ ಆಧ್ಯಾತ್ಮ. ಪ್ರತಿಯೊಬ್ಬರೂ ಸಾಹಿತ್ಯಾತ್ಮಕ ಚಿಂತನೆಗಳಲ್ಲಿ ತೊಡಗಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದರು.

ಸಮಾಜದಲ್ಲಿ ಕೆಲವರು ಚುಚ್ಚು ಮಾತುಗಳ ಕಾರಣದಿಂದ ದೂರ ಕುಳಿತುಕೊಳ್ಳುತ್ತಾರೆ, ಕೆಲವರು ಜಾತಿಯ ಹಿನ್ನೆಲೆಯಲ್ಲಿ ಹತ್ತಿರ ಬರಲು ಹೆದರುತ್ತಾರೆ. ಇವುಗಳನ್ನೆಲ್ಲ ಬುದ್ಧನ ಉಪದೇಶಗಳು ಒಪ್ಪುವುದಿಲ್ಲ ಎಂದು ಉದಾಹರಣೆ ನೀಡಿದರು.

ಮಹಿಳಾ ಶೋಷಣೆಯನ್ನು ತಡೆಗಟ್ಟಲು ಡಾ.ಅಂಬೇಡ್ಕರ್ ನೀಡಿದ ಕೊಡುಗೆಯನ್ನು ಸ್ಮರಿಸಿದ ಅವರು, ಎಲ್ಲ ಜಾತಿಗಳಲ್ಲೂ ಮಹಿಳೆ ಶೋಷಣೆಗೊಳಗಾಗಿದ್ದಾಳೆ. ಕುಬ್ಜ ಮನಸ್ಸುಗಳನ್ನು ಬೆಳಕಿಗೆ ತರುವ ಶಕ್ತಿ ಸಾಹಿತ್ಯಕ್ಕೂ, ಸಂಘಟನೆಗೂ ಇದೆ. ಬರಹಗಳು ಸಮಾಜವನ್ನು ಸುಧಾರಣೆಯ ಮಾರ್ಗಕ್ಕೆ ಒಯ್ಯಲು ನೆರವಾಗುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಅರ್ಜುನ್ ಗೋಳಸಂಗಿ ಮಾತನಾಡಿ, ದಲಿತ ಸಾಹಿತ್ಯ ಪರಿಷತ್ ಸ್ವತಂತ್ರ ಮತ್ತು ನೋಂದಾಯಿತ ಸಂಸ್ಥೆ. ಹೆತ್ತೂರು ನಾಗರಾಜ್ ನೇತೃತ್ವದಲ್ಲಿ ಐತಿಹಾಸಿಕ ಜಿಲ್ಲಾ ಸಮ್ಮೇಳನಗಳು ನಡೆದಿವೆ. ಹಾಸನದಲ್ಲಿ ರಾಜ್ಯ ಮಟ್ಟದ ಸಮ್ಮೇಳನಕ್ಕೂ ಎಲ್ಲರ ಸಹಕಾರ ಅಗತ್ಯ ಎಂದರು. ಜಿಲ್ಲಾ ದಸಾಪ ಮಾಜಿ ಅಧ್ಯಕ್ಷ ಹೆತ್ತೂರು ನಾಗರಾಜ್ ಮಾತನಾಡಿದರು.
ಮೊದಲ ಹಾಡಿನ ರಾಗಸರಾಗ ಪುಸ್ತಕ ಬಿಡುಗಡೆ: ಸಾಹಿತಿ ಗುರುಮೂರ್ತಿ ಹಾಗೂ ಪಿ. ರಾಘವೇಂದ್ರ ರಚಿಸಿದ ಮೊದಲ ಹಾಡಿನ ರಾಗಸರಾಗ ಕವನ ಸಂಕಲನವನ್ನು ವೇದಿಕೆಯಲ್ಲಿ ಗಣ್ಯರು ಬಿಡುಗಡೆ ಮಾಡಿದರು. ಸಾಹಿತಿ ಡಾ.ಐಚನಹಳ್ಳಿ ಕೃಷ್ಣಪ್ಪ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ನಂದೀಶ್ ಮತ್ತು ತಂಡದವರು ನಡೆಸಿಕೊಟ್ಟ ತೊಗಲು ಗೊಂಬೆಯಾಟ ಗಮನ ಸೆಳೆಯಿತು.
ಕವಿಗೋಷ್ಠಿಯಲ್ಲಿ 20 ಜನ ಭಾಗವಹಿಸಿ ಉತ್ತಮ ಕವಿತೆಗಳನ್ನು ವಾಚಿಸಿದರು. ಎಲ್ಲರಿಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಪದಗ್ರಹಣ ಸಮಾರಂಭದಲ್ಲಿ ತಾಲೂಕು ದಲಿತ ಸಾಹಿತ್ಯ ಪರಿತ್‌ನ ತಾಲ್ಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಕೆ. ವಸಂತಯ್ಯ ಹಾಗೂ ತಂಡವನ್ನು ವಿವಿಧ ಸಂಘಟನೆಗಳು ಮುಖಂಡರು ಸನ್ಮಾಸಿನಿದರು.

ಬೈಚನಹಳ್ಳಿ ಪಿಯು ಕಾಲೇಜು ಪ್ರಾಂಶುಪಾಲ ಡಿ.ಕೆ.ಕುಮಾರಯ್ಯ, ಸರ್ಕಾರಿ ನಸಿರ್ಂಗ್ ಕಾಲೇಜಿನ ಪ್ರಾಂಶುಪಾಲರಾದ ಶೈಲಜಾ, ತಾಲೂಕು ದಸಾಪ ಉಪಾಧ್ಯಕ್ಷ ಕಡವಿನಹೊಸಹಳ್ಳಿ ಕೆ.ಎಂ.ನಾಗರಾಜ್, ಕಾರ್ಯದರ್ಶಿ ರಾಘವೇಂದ್ರ ಎಂ. ಸಂಘಟನಾ ಕಾರ್ಯದರ್ಶಿ ಎಚ್.ಎಂ. ಶಿವರಾಮ್, ಖಜಾಂಚಿ ಎಚ್.ಗಿರೀಶ್, ಗೌರವಾಧ್ಯಕ್ಷ ಬಿ.ಕೆ.ವೆಂಕಟೇಶ್, ಸಾಹಿತ್ಯ ಕಾರ್ಯದರ್ಶಿ ಎನ್.ಎಲ್.ಸುರೇಶ್, ಮಹಿಳಾ ಕಾರ್ಯದರ್ಶಿ ಮಮತಾ, ಕಾನೂನು ಸಲಹೆಗಾರರು ಶ್ರೀಲಕ್ಷ್ಮೀ, ಜಿಲ್ಲಾ ಘಟಕದ ದಸಾಪ ಅಧ್ಯಕ್ಷೆ ಕೆ.ಸಿ.ಸೋಮಲತಾ, ಜಿಲ್ಲಾ ಘಟಕದ ಸಹ ಕಾರ್ಯದರ್ಶಿ ಹಾನಗಲ್ ದೇವರಾಜ್, ಮಧು ಕೆ.ದೇವರಾಜ್ , ಡಾ.ವಸಂತ್ ಕುಮಾರ್, ಉಪಾಧ್ಯಕ್ಷ ಡಾ.ಎಸ್.ಎಸ್.ದೇವರಾಜ್ ಕಾರ್ಯದರ್ಶಿ, ಎಂ.ಕೆ.ಕೃಷ್ಣಯ್ಯ ಸಂಘಟನಾ ಕಾರ್ಯದರ್ಶಿ ಟಿ.ಸಿ.ಪ್ರವೀಣ್, ನಿರ್ದೇಶಕರಾದ ರಾಜೇಶ್, ವೀರೇಂದ್ರ, ಸರ್ಕಾರಿ ಪಾಲಿಟೆಕ್ನಿಕ್ ಉಪನ್ಯಾಸಕ ಎನ್.ಆರ್.ಶಿವರಾಂ, ದಲಿತ ಮುಖಂಡರು ಕೃಷ್ಣದಾಸ್, ಎಂ.ಸೋಮಶೇಖರ್, ಮಾದಿಗ ದಂಡೋರದ ಮೈಸೂರು ವಿಭಾಗದ ಪ್ರಧಾನ ಕಾರ್ಯದರ್ಶಿ ತೆರಣ್ಯ ವಿಜಯಕುಮಾರ್, ದಸಂಸ ರಾಜ್ಯ ಸಂಚಾಲಕ ಎಂ ಸೋಮಶೇಖರ, ನಿವೃತ್ತ ಶಿಕ್ಷಕ ಡಿ.ಆರ್.ರಂಗಸ್ವಾಮಿ, ವಿಭಾಗಿಯ ಸಂಯೋಜಕ ಡಾ. ಚಂದ್ರಗುಪ್ತ, ತಾ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net