ತಾಲೂಕಿನ ಪಾಳ್ಯ ಹಾಗೂ ಕುಂದೂರು ಹೋಬಳಿಯ ಹೊಳೆಬೆಳ್ಳೂರು, ಕೆಂಚನಹಳ್ಳಿ, ಗಂಜಿಗೆರೆ, ಕದಾಳು, ಮಡಬಲು, ತಾಳೂರು, ಹುಣಸುವಳ್ಳಿ, ದೊಡ್ಡಕಣಗಾಲು, ಪಾಳ್ಯ ಗ್ರಾಮ ಪಂಚಾಯಿತಿ ಹಾಗೂ ಕಸಬಾ ಹೋಬಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿನ ರೈತರು ಬೆಳೆದಿರುವ ಮುಸುಕಿನಜೋಳದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿವೆ. ಹಲವರ ಜಮೀನಿನಲ್ಲಿ ಈ ರೋಗವು ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಇದರಿಂದ ಬೆಳೆಯ ಬೆಳವಣಿಗೆ ಕುಂಠಿತಗೊಳ್ಳುವ ಹಾಗೂ ಒಣಗಿ ಹೋಗುವ ಆತಂಕ ಎದುರಾಗಿದೆ.