ಸಂಘಟನೆ ಬಲಿಷ್ಠವಾದಾಗ ಹಕ್ಕು ಗಳಿಕೆ ಸಾಧ್ಯ

ಶ್ರೀಚನ್ನಕೇಶವಸ್ವಾಮಿ ದಾಸೋಹ ಸಭಾ ಭವನದಲ್ಲಿ ತಾಲೂಕು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ನಿವೃತ್ತ ಸಹಾಯಕರನ್ನು ಸನ್ಮಾನಿಸಲಾಯಿತು. ಡಿ.ಎಸ್.ಬಡಗಿಗೌಡ, ಕೆ.ಪಿ. ಜಗದೀಶ್ ಇತರರು ಇದ್ದರು.
ಶ್ರೀಚನ್ನಕೇಶವಸ್ವಾಮಿ ದಾಸೋಹ ಸಭಾ ಭವನದಲ್ಲಿ ತಾಲೂಕು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ನಿವೃತ್ತ ಸಹಾಯಕರನ್ನು ಸನ್ಮಾನಿಸಲಾಯಿತು. ಡಿ.ಎಸ್.ಬಡಗಿಗೌಡ, ಕೆ.ಪಿ. ಜಗದೀಶ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • organization
ಬೇಲೂರು: ವಿವಿಧ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳಲ್ಲಿ ಕೆಲಸ ನಿರ್ವಹಿಸುವ ನೌಕರರು ತಮ್ಮ ಕೆಲಸದ ನಡುವೆಯೂ ಸಂಘಟನೆಗೆ ಒತ್ತು ಕೊಟ್ಟು ಸಂಘಟನೆಯನ್ನು ಬಲಿಷ್ಠವನ್ನಾಗಿ ಮಾಡಿದಾಗ ಮಾತ್ರ ನೌಕರರು ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದು ಸಹಕಾರ ಸಂಘಗಳ ಹಾಗೂ ಸಹಕಾರಿ ಬ್ಯಾಂಕುಗಳ ಕ್ಷೇಮಾಭಿವೃದ್ಧಿ ಮಹಾ ಮಂಡಳದ ಅಧ್ಯಕ್ಷ ಡಿ.ಎಸ್.ಬಡಗಿಗೌಡ ಹೇಳಿದರು.
ಪಟ್ಟಣದ ಶ್ರೀಚನ್ನಕೇಶವಸ್ವಾಮಿ ದಾಸೋಹ ಸಭಾ ಭವನದಲ್ಲಿ ತಾಲೂಕು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಕೆ.ಎನ್.ರಾಜಣ್ಣರ ನಿರಂತರ ಪ್ರಯತ್ನದ ಫಲವಾಗಿ 128ಎ ನಿಯಮ ನಿಯಮ ಜಾರಿಗೆ ಬಂದಿದ್ದು, ಕೆಲವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರಿಂದ ಪ್ರಕರಣ ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿದೆ. ಜೂನ್ 17ರಂದು ವಿಚಾರಣೆ ಇದ್ದು, ನಂತರ ಬೈಲಾ ರೂಪುರೇಷೆ ಸಿದ್ಧಪಡಿಸಿ ನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಮಹಾಮಂಡಳವು ಶ್ರಮಿಸುತ್ತಿದೆ. ಸಂಘಟನೆಗೆ ಎಲ್ಲ ತಾಲೂಕುಗಳ ಸಕ್ರಿಯ ಸಹಭಾಗಿತ್ವ ಅಗತ್ಯವಿದೆ. ರಾಜ್ಯದ 175 ತಾಲೂಕುಗಳ ಪೈಕಿ 100 ತಾಲೂಕುಗಳು ಮಾತ್ರ ಸಕ್ರಿಯವಾಗಿದ್ದು, ಉಳಿದ ತಾಲೂಕುಗಳನ್ನು ಸಂಘಟನೆಯೊಂದಿಗೆ ಸೇರಿಸುವ ಕಾರ್ಯ ನಡೆಯುತ್ತಿದೆ ಎಂದರು.
ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಕೆ.ಪಿ.ಜಗದೀಶ್ ಮಾತನಾಡಿ, ನೌಕರರ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಸಂಘ ನಿರಂತರವಾಗಿ ಶ್ರಮಿಸುತ್ತಿದೆ. ನೌಕರರಿಗೆ ಎದುರಾದ ಹಲವು ಸಮಸ್ಯೆಗಳನ್ನು ಆರ್‌ಸಿಎಸ್, ಡಿಆರ್ ಹಾಗೂ ಜೆಆರ್ ಅಧಿಕಾರಿಗಳ ಸಹಕಾರದೊಂದಿಗೆ ರಾಜ್ಯ ಮಟ್ಟದ ಸಭೆಗಳಲ್ಲಿ ಯಶಸ್ವಿಯಾಗಿ ಪರಿಹರಿಸಲಾಗಿದೆ. ರಾಜಕೀಯ ಒತ್ತಡ, ಜಿಲ್ಲಾ ಬ್ಯಾಂಕಿನ ಪ್ರಭಾವ, ನೌಕರರ ಒಗ್ಗಟ್ಟಿನ ಕೊರತೆ ಸಂಘಟನೆಯ ಮೇಲೆ ಪರಿಣಾಮ ಬೀರುತ್ತಿದೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಎಲ್ಲರಿಗೂ ಒಳಿತಾಗುತ್ತದೆ ಎಂದರು.
ಸಂಘದ ಕಾರ್ಯದರ್ಶಿ ಸೋಮಶೇಖರ್, ಖಜಾಂಚಿ ಚರಣ್, ನಿರ್ದೇಶಕರಾದ ಶಿವಕುಮಾರ್, ಜ್ಯೋತಿ, ಸುರೇಶ್, ಮೋಹನ್, ರವಿಕುಮಾರ್, ರಂಗಸ್ವಾಮಿ ಸೇರಿದಂತೆ ಇತರರಿದ್ದರು. ಇದೇ ಸಂದರ್ಭ ನಿವೃತ್ತ ಸಹಾಯಕ ನಿರ್ದೇಶಕರನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net