ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್ ಮಾತನಾಡಿ, ಸವಲತ್ತು ಸಮರ್ಪಣಾ ಸಮಾವೇಶವನ್ನು ಅರಸೀಕೆರೆಯಲ್ಲಿ ಮಾಡಿದ್ದರೆ ಚೆನ್ನಾಗಿ ಇರುತ್ತಿತ್ತು. ಇವರು ಹೊಸ ಯೋಜನೆ ಏನು ಕೊಟ್ಟಿದ್ದಾರೆ? ರಿಯಲ್ ಎಸ್ಟೇಟ್‌ನವರಿಗೆ ಬೇಗ ಕೆಲಸ ಆಗಲಿದೆ. ಅನೇಕ ಕಡೆ ಸರ್ವೇ ಆದರೂ ಪೋಡಿ, ದುರಸ್ತಿ ಆಗಿಲ್ಲ, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಕೊಟ್ಟಿಲ್ಲ, ಮೆಕ್ಕೆ ಜೋಳ ಖರೀದಿ ಕೇಂದ್ರ ತೆರೆದಿಲ್ಲ. ಈ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಆಗಿರುವ ಕೆಲಸ-ಕಾರ್ಯಗಳ ಬಗ್ಗೆ ಡಿಸಿ ಅವರು ಪಟ್ಟಿ ಕೊಡಲಿ ಎಂದು ಆಗ್ರಹಿಸಿದರು.