ಭಾನುವಾರ ವಿವಿಧ ಸಂಘಟನೆಗಳ ಮುಖಂಡರು, ಸುತ್ತಲಿನ ಗ್ರಾಮಸ್ಥರು ದೇವಾಲಯದ ಅವರಣದಲ್ಲಿ ಸಭೆ ನಡೆಸಿ ಫೋಟೋಗ್ರಾಫರ್ಸ್‌ಗಳ ವರ್ತನೆ ಖಂಡಿಸಿದರು. ಬಳಿಕ ಮಾತನಾಡಿದ ಮುಖಂಡರು, ತಾಲೂಕಿನ ಮರಗುಂದ ಗ್ರಾಮದ ಬೆಟ್ಟದ ಭೈರವೇಶ್ವರ ದೇವಾಲಯದ ಅವರಣದಲ್ಲಿ ಅಸಭ್ಯವಾಗಿ ಪ್ರೀ ವೆಡ್ಡಿಂಗ್ ಶೂಟ್ ಚಿತ್ರೀಕರಣ ನಡೆಸುತ್ತಿದ್ದ ಫೋಟೋ ಗ್ರಾಫರ್ಸ್‌ಗಳನ್ನು ಪ್ರಶ್ನಿಸಿದ್ದಕ್ಕೆ ಗಲಾಟೆ ನಡೆದು ಪ್ರಕರಣ ಅಂತಿಮವಾಗಿ ಹಲ್ಲೆಯಲ್ಲಿ ಅಂತ್ಯಗೊಂಡಿತ್ತು. ಫೋಟೋಗ್ರಾಫರ್‌ಗಳ ವರ್ತನೆ ಖಂಡನೀಯ ಎಂದರು.