ವೀರಶೈವ ಧರ್ಮ ವಿಶ್ವಕ್ಕೆ ಮಾದರಿ

ಹೊಳೆನರಸೀಪುರ ತಾಲೂಕಿನ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜರುಗಿತು. ಶ್ರೀ ಕಲ್ಯಾಣ ಸ್ವಾಮೀಜಿ, ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ರಾಜಶೇಖರ್, ಪರಮೇಶ್ವರ್ ಇತರರು ಇದ್ದರು.
ಹೊಳೆನರಸೀಪುರ ತಾಲೂಕಿನ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜರುಗಿತು. ಶ್ರೀ ಕಲ್ಯಾಣ ಸ್ವಾಮೀಜಿ, ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ರಾಜಶೇಖರ್, ಪರಮೇಶ್ವರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Veerashaiva
ಹೊಳೆನರಸೀಪುರ: ಬಸವಣ್ಣನವರ ಚಿಂತನೆಯ ಅಡಿಪಾಯದಿಂದ ವೀರಶೈವ ಲಿಂಗಾಯತ ಧರ್ಮವು ವಿಶ್ವಕ್ಕೆ ಮಾದರಿಯಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ನೂತನ ಅಧ್ಯಕ್ಷ ಕೆ.ರಾಜಶೇಖರಯ್ಯ ಹೇಳಿದರು.
ತಾಲೂಕಿನ ತೇಜೂರು ಗ್ರಾಮದ ಸಿದ್ದರಾಮಯ್ಯ ಮಠದ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವರು ಕೇವಲ ಗುಡಿ-ಗುಡಾರಗಳಲ್ಲಿ ಇಲ್ಲ. ಬದಲಿಗೆ ಪ್ರತಿಯೊಬ್ಬರ ಮನಸ್ಸಿನಲ್ಲಿದ್ದಾನೆ ಎಂಬುದನ್ನು ಶರಣರು ಸಾರಿದ್ದಾರೆ. ಶ್ರೀಮಂತರು ಶಿವಾಲಯಗಳನ್ನು ಕಟ್ಟಿಸಿದರೆ, ಬಡವರು ತಮ್ಮ ದೇಹವನ್ನೇ ದೇಗುಲವಾಗಿಸಿಕೊಂಡು ಭಕ್ತಿ ಸಮರ್ಪಿಸಬೇಕು ಎನ್ನುವ ಆಶಯ ವಚನಗಳಲ್ಲಿ ಇದೆ. ಅದರಂತೆ ನಾವು ನಡೆಯಬೇಕು ಎಂದರು.
ಶ್ರೀ ಕಲ್ಯಾಣ ಸ್ವಾಮೀಜಿ, ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉದ್ಯಮಿ ಗ್ರಾನೈಟ್ ರಾಜಶೇಖರ್, ಹಿರಿಯ ಮುಖಂಡ ಪುಟ್ಟಸೋಮಪ್ಪ ಮಾತನಾಡಿದರು.
ಅಧ್ಯಕ್ಷರಾಗಿ ಕೆ. ರಾಜಶೇಖರಯ್ಯ, ನಿರ್ದೇಶಕರಾಗಿ ಸುರೇಶ್, ಇಂದ್ರಾಣಿ, ರಾಜೇಶ್ವರಿ, ಬಸವರಾಜು, ಶಿವಕುಮಾರ್, ದೇವರಾಜು, ರೇಣುಕಾ ಮೂರ್ತಿ, ಕಾಳಪ್ಪ, ಲೋಹಿತಾಶ್ವ, ರವಿ, ಮಹೇಶ್, ಲೋಹಿತಾಶ್ವಯ್ಯ, ಕಾರ್ಯದರ್ಶಿಯಾಗಿ ರೇವಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಯೋಗೇಶ್ ಪ್ರಕಟಿಸಿದರು.
ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷೆ ಚಂದ್ರಮತಿ, ಮಹಾಸಭಾದ ಪರಮೇಶ್ವರ್, ಶಿವಕುಮಾರ್, ಪುನೀತ್, ಪಟೇಲ್, ಮನೋಹರ್, ದೇವರಾಜಪ್ಪ, ಕುಮಾರಸ್ವಾಮಿ, ಕುಮಾರಸ್ವಾಮಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net