ಹೊಳೆನರಸೀಪುರ: ತಾಲೂಕಿನ ತಾತನಹಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದಿಂದ ರೋಸಿಹೋಗಿದ್ದ ಮಹಿಳಾ ಸಂಘದ ಸದಸ್ಯೆಯರೇ ಪೊಲೀಸರಿಗೆ ಮಾಹಿತಿ ನೀಡಿ ಮಾರಾಟಗಾರರನ್ನು ಸೋಮವಾರ ರಾತ್ರಿ ಮಾಲು ಸಹಿತ ಇಬ್ಬರನ್ನು ಹಿಡಿದುಕೊಟ್ಟಿದ್ದಾರೆ.
ಗ್ರಾಮದ ಗವಿಗೌಡ, ನಾಗಮಣಿ ಬಂಧಿತರು. ಇವರು ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಮಹಿಳಾ ಸಂಘದ ಸದಸ್ಯೆಯರಾದ ಲಕ್ಷ್ಮಮ್ಮ , ಶಶಿ, ಪ್ರೇಮಾ, ಕಮಲಮ್ಮ, ಹೇಮಾ ಅವರು ಪೊಲೀಸರಿಗೆ ಮಾಹಿತಿ ನೀಡಿ ಆವರು ಅಗಮಿಸುವ ವರೆಗೂ ಆರೋಪಿಗಳನ್ನು ಹಿಡಿದಿಟ್ಟಿದ್ದರು.
ಖಚಿತ ಮಾಹಿತಿ ಮೇರೆಗೆ ಸ್ಥಳ್ಕಕಾಗಮಿಸಿದ ಹಳ್ಳಿಮೈಸೂರು ಪೊಲೀಸರು, ಆರೋಪಿಗಳನ್ನು ಬಂಧಿಸಿ ಮಾರಾಟಕ್ಕೆ ತಂದಿದ್ದ ಮದ್ಯ ವಶಪಡಿಸಿಕೊಂಡು, ವಿಚಾರಣೆಗೆ ಒಳಪಡಿಸಿದ್ದಾರೆ. ಕಾರ್ಯಾಚರಣೆ ವೇಳೆ ಆರೋಪಿ ನಾಗಮಣಿ ಪತಿ ರೇವಣ್ಣ ಪರಾರಿಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.