ಮಂಗಳೂರಿನಿಂದ ಬೆಂಗಳೂರಿನ ಕಡೆಗೆ ತೆರಳುತ್ತಿದ್ದ ಡಾಂಬರ್ ತುಂಬಿದ ಲಾರಿ ಅತಿಯಾದ ಮಳೆಗೆ ಉರುಳಿ ಬಿದ್ದು ಡಾಂಬರ್ ಚೆಲ್ಲಿಸಿದ್ದರಿಂದ ವಾಹನ ಸಂಚಾರಕ್ಕೆ ಕೆಲಕಾಲ ತೊಡಕು ಉಂಟಾಗಿತ್ತು. ಶಿರಾಡಿಘಾಟ್‌ನ ಹಲವೆಡೆ ಮರಗಳು ಧರೆಗುರುಳಿದ್ದು ಹೆದ್ದಾರಿ ಇಲಾಖೆ ತೆರವುಗೊಳಿಸಿದೆ. ಒಟ್ಟಾರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವಘಡ ನಿಗ್ರಹ ಪಡೆ ಕಾರ್ಯನಿರ್ವಹಣೆ ಮುಂದಾಗಿದ್ದು, ಹೆಚ್ಚಿನ ಅವಘಡಗಳಿಗೆ ಆಸ್ಪದ ನೀಡದಂತೆ ಕಾರ್ಯನಿರ್ವಹಿಸುತ್ತಿದೆ.