ಇದರಿಂದ ಜನರು ಹೈರಾಣಾಗುವಂತಾಗಿದೆ. ವೃತ್ತಕ್ಕೆ ಹೊಂದಿಕೊಂಡಂತಿರುವ ನವೋದಯ ವಿದ್ಯಾ ಸಂಸ್ಥೆ, ಚಾಮುಂಡೇಶ್ವರಿ ವಿದ್ಯುತ್ ನಿಗಮ ಹಾಗೂ ಕೋಟೆ ಬಡಾವಣೆಗೆ ಪ್ರವೇಶ ಮಾಡಲು ಇದೇ ಪ್ರಮುಖ ವೃತ್ತವಾಗಿದ್ದು ಕೆಲವು ಮೀಟರ್‌ಗಳ ಅಂತರದಲ್ಲಿ ತಾಲೂಕು ಪಂಚಾಯಿತಿ ಮಾಧ್ಯಮಿಕ ಶಾಲೆ, ಸ್ವತಂತ್ರ ಪದವಿ ಪೂರ್ವ ಕಾಲೇಜು ಇದೆ. ಇದಲ್ಲದೆ ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಮಂಗಳೂರು ಹಾಗೂ ಬೆಂಗಳೂರಿಗೆ ನವೋದಯ ವೃತ್ತದ ಮುಖಾಂತರವೇ ಸಾಗಬೇಕಾಗಿರುವುದರಿಂದ ನಾನಾ ಪ್ರದೇಶಗಳಿಂದ ಬರುವ ಶಾಲಾ ವಿದ್ಯಾರ್ಥಿಗಳು, ಉದ್ಯೋಗಿಗಳು ಇದೇ ವೃತ್ತದಲ್ಲಿ ಇಳಿದು ಸಾಗುತ್ತಾರೆ. ಹಾಗಾಗಿ ಇಲ್ಲಿ ನಿತ್ಯವೂ ಜನರ ಓಡಾಟ ಸಾಮಾನ್ಯವಾಗಿ ಹೆಚ್ಚಿರುತ್ತದೆ. ಪೀಕ್ ಅವರ್‌ನಲ್ಲಿ ಅಪಾರ ಪ್ರಮಾಣದ ವಾಹನಗಳು ವೃತ್ತದ ಮುಖಾಂತರ ಹಾದು ಹೋಗುತ್ತವೆ. ಇದರಿಂದಾಗಿ ಜನರು ರಸ್ತೆ ದಾಟಲು ಹರಸಾಹಸ ಮಾಡಬೇಕಿದೆ.