ಟೈಮ್ಸ್ ಪಿಯು ಕಾಲೇಜು ನಿರಂತರ ಸಾಧನೆ

ಚನ್ನರಾಯಪಟ್ಟಣದಲ್ಲಿನ ಟೈಮ್ಸ್ ಪಿಯು ಕಾಲೇಜಿನ 20245-26ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಕಾಲೇಜಿಗೆ ಕೀರ್ತಿ ತಂದ ಮಕ್ಕಳನ್ನು ಸಂಸ್ಥೆಯಿಂದ ಅಭಿನಂದಿಸಲಾಯಿತು. ಬಿ.ಕೆ.ಗಂಗಾಧರ್, ಎ.ಸಿ.ಸುನೀಲ್, ಎಚ್.ಎಂ.ಶ್ರೀಕಂಠ, ಕೆ.ವಿ. ಸಂಜಯ್ ಇದ್ದರು.
ಚನ್ನರಾಯಪಟ್ಟಣದಲ್ಲಿನ ಟೈಮ್ಸ್ ಪಿಯು ಕಾಲೇಜಿನ 20245-26ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಕಾಲೇಜಿಗೆ ಕೀರ್ತಿ ತಂದ ಮಕ್ಕಳನ್ನು ಸಂಸ್ಥೆಯಿಂದ ಅಭಿನಂದಿಸಲಾಯಿತು. ಬಿ.ಕೆ.ಗಂಗಾಧರ್, ಎ.ಸಿ.ಸುನೀಲ್, ಎಚ್.ಎಂ.ಶ್ರೀಕಂಠ, ಕೆ.ವಿ. ಸಂಜಯ್ ಇದ್ದರು.
Published on
ಚನ್ನರಾಯಪಟ್ಟಣ : ಪಟ್ಟಣದಲ್ಲಿನ ಟೈಮ್ಸ್ ಪಿಯು ಕಾಲೇಜು ಪ್ರತಿವರ್ಷದಂತೆ 2025-26ನೇ ಸಾಲಿನಲ್ಲಿ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ತನ್ನ ಕೀರ್ತಿ ಹೆಚ್ಚಿಸಿಕೊಂಡಿದೆ.
ಟೈಮ್ಸ್ ಪಿಯು ಕಾಲೇಜು ತಾಲೂಕು, ತಾಲೂಕಿನಾಚೆಗೂ ತನ್ನ ಕೀರ್ತಿಯನ್ನು ಕಳೆದ 12 ವರ್ಷಗಳಿಂದ ಸಾಧಿಸುತ್ತಾ ಬಂದಿದೆ. ವಿಜ್ಞಾನ ವಿಭಾಗದಲ್ಲಷ್ಟೆ ಪಿಯು ಕಾಲೇಜು ತೆರೆದು 12 ವರ್ಷಗಳಿಂದ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಪ್ರಸಕ್ತ ಸಾಲಿನಲ್ಲಿ ಕಾಲೇಜು ದ್ವಿತೀಯ ಪಿಯುಸಿಯಲ್ಲಿ 270 ಮಕ್ಕಳನ್ನು ಹೊಂದಿದ್ದು, ಪ್ರಸಕ್ತ ವರ್ಷ-ಶೇ.99 ರಷ್ಟು ಫಲಿತಾಂಶ ದಾಖಲಿಸಿದೆ. 270 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 130 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿಯೂ, 129 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 16 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಮೂಲಕ ಉತ್ತಮ ಸಾಧನೆ ಮಾಡಿದ ಹೆಗ್ಗಳಿಕೆ ಹೊಂದಿದೆ.
19 ವಿದ್ಯಾರ್ಥಿಗಳು ವಿಜ್ಞಾನ ವಿಭಾಗದ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದು ಉತ್ತಮ ಫಲಿತಾಂಶ ದಾಖಲಿಸಿದ ಕೆ ಎ.ದೀಕ್ಷಾ-600 ಅಂಕಗಳಿಗೆ 5913ಅಂಕ ಪಡೆದಿದ್ದಾರೆ, ಡಿ.ಎಂ.ಹರ್ಷಿತಾ -586, ಡಿ. ಧನ್ಯಾ-583, ಬಿ.ವಿ.ಗಣೇಶ್-583, ಎಸ್.ಆರ್.ಸಾನಿಕಾ-582, ಎನ್.ಕೆ.ಚೈತ್ರಾ-581 ಮುದಾಸಿರ್-580, ಕೆ.ಆರ್.ನಂದಿತಾ-580 ಮತ್ತು ಎನ್. ಭುವನ್-580 ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಚನ್ನರಾಯಪಟ್ಟಣ ಟೈಮ್ಸ್ ಕಾಲೇಜಿನ ಪ್ರಾಂಶುಪಾಲ ಎ.ಸಿ.ಸುನೀಲ್ ಮಾತನಾಡಿ, ನಿರಂತರ ಶಮ್ರದೊಂದಿಗೆ ಉತ್ತಮ ಸಾಧನೆ ಮಾಡಿದ ಮಕ್ಕಳನ್ನು ಕಾಲೇಜಿನಿಂದ ಅಭಿನಂದಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಅವರ ಈ ಉತ್ತಮ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಸಿಬ್ಬಂದಿ, ಪಾಲಕರು ಕಾರಣರಾಗಿದ್ದಾರೆ. ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.
ಕಾಲೇಜಿಗೆ ಕೀರ್ತಿ ತಂದ ಮಕ್ಕಳನ್ನು ಶುಕ್ರವಾರ ಕಾಲೇಜು ಆಡಳಿತ ಮಂಡಳಿ ಅಭಿನಂದಿಸಿ ಸಿಹಿ ಹಂಚಿ ಸಂಭ್ರಮಿಸಿತು. ಟೈಮ್ಸ್ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ.ಗಂಗಾಧರ್, ಹಿರಿಯ ಪ್ರಾಧ್ಯಾಪಕ ಎಚ್.ಎಂ.ಶ್ರೀಕಂಠ, ಕೆ.ವಿ.ಸಂಜಯ್ ಸೇರಿದಂತೆ ಬೋಧಕ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net