ಚಿರತೆಗಳ ದಾಳಿಗೆ ಮೂರು ಕರು ಬಲಿ

ಚಿರತೆಗಳ ದಾಳಿ
ಚಿರತೆಗಳ ದಾಳಿ
Published on
ಹೊಳೆನರಸೀಪುರ: ತಾಲೂಕಿನ ಹಳ್ಳಿ ಮೈಸೂರು ಹೋಬಳಿ ಟಿ.ಮಾಯಿಗೌಡನಹಳ್ಳಿ ಗ್ರಾಮದಲ್ಲಿ ಬುಧವಾರ ಮುಂಜಾನೆ ಮೂರು ಕರುಗಳ ಮೇಲೆ ಚಿರತೆಗಳು ದಾಳಿ ನಡೆಸಿ ಕೊಂದು ಹಾಕಿವೆ.
ಗ್ರಾಮದ ನಿವಾಸಿ ದಿಲೀಪ್ ಕೊಟ್ಟೆಗೆಯಲ್ಲಿ ಎಂದಿನಂತೆ ಮಂಗಳವಾರ ರಾತ್ರಿ ಮೂರು ಕರುಗಳು ಹಾಗೂ ಹಸುವನ್ನು ಕಟ್ಟಿದ್ದರು. ಬೆಳಗ್ಗೆ ಎದ್ದು ದನಗಳನ್ನು ಹೊರಗೆ ಕಟ್ಟಲು ಹೋದಾಗ ಚಿರತೆಗಳು ಕರುಗಳ ಮೇಲೆ ದಾಳಿ ಮಾಡಿ ಬಲಿ ಪಡೆದಿರುವುದು ತಿಳಿದು ಬಂದಿದೆ.

ಮುಂಜಾನೆ ಎರಡು ಚಿರತೆಗಳು ಕೊಟ್ಟಿಗೆಗೆ ನುಗ್ಗಿ ಮೂರು ಕರುಗಳನ್ನು ಬೇರೆ ಬೇರೆ ಸ್ಥಳಕ್ಕೆ ಎಳೆದೊಯ್ದು ತಿಂದು ಹಾಕಿರುವುದು ತಿಳಿದು ಬಂದಿದೆ. ಬುಧವಾರ ಬೆಳಗ್ಗೆ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net