ಅಭಿವೃದ್ಧಿಯಲ್ಲಿ ಯಾವುದೇ ಸ್ವಾರ್ಥ ಇಲ್ಲ

ಬೇಲೂರು ತಾಲೂಕು ಬ್ರಾಹ್ಮಣ ಮಹಾಸಭಾ ಚಾರಿಟಬಲ್ ಟ್ರಸ್ಟ್  ಹಾಗೂ ವಿಪ್ರ ಮಹಿಳಾ ಒಕ್ಕೂಟದ ಸಹಯೋಗದೊಂದಿಗೆ  ಶ್ರೀ ಚನ್ನಕೇಶವಸ್ವಾಮಿಗೆ ಹಮ್ಮಿಕೊಂಡಿದ್ದ ಮಹಾಭಿಷೇಕ ಕಾರ್ಯಕ್ರಮವನ್ನು ಶಾಸಕ ಎಚ್.ಕೆ.ಸುರೇಶ್ ಉದ್ಘಾಟಿಸಿದರು. ರಾಘವೇಂದ್ರ ಭಟ್, ಸಿ.ಆರ್.ವಿಜಯಕೇಶವ, ನರಸಿಂಹಮೂರ್ತಿ, ಮಂಜುನಾಥ ಮೂರ್ತಿ ಇತರರಿದ್ದರು.
ಬೇಲೂರು ತಾಲೂಕು ಬ್ರಾಹ್ಮಣ ಮಹಾಸಭಾ ಚಾರಿಟಬಲ್ ಟ್ರಸ್ಟ್ ಹಾಗೂ ವಿಪ್ರ ಮಹಿಳಾ ಒಕ್ಕೂಟದ ಸಹಯೋಗದೊಂದಿಗೆ ಶ್ರೀ ಚನ್ನಕೇಶವಸ್ವಾಮಿಗೆ ಹಮ್ಮಿಕೊಂಡಿದ್ದ ಮಹಾಭಿಷೇಕ ಕಾರ್ಯಕ್ರಮವನ್ನು ಶಾಸಕ ಎಚ್.ಕೆ.ಸುರೇಶ್ ಉದ್ಘಾಟಿಸಿದರು. ರಾಘವೇಂದ್ರ ಭಟ್, ಸಿ.ಆರ್.ವಿಜಯಕೇಶವ, ನರಸಿಂಹಮೂರ್ತಿ, ಮಂಜುನಾಥ ಮೂರ್ತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್.ಕೆ. ಸುರೇಶ್ ಹೇಳಿಕೆ
ಬೇಲೂರು : ವಿಶ್ವ ವಿಖ್ಯಾತ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಉತ್ಸವಗಳು ಹಾದು ಹೋಗುವ ವೈಕುಂಠ ಬೀದಿಯ ರಸ್ತೆ ಚರಂಡಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ಇದರಲ್ಲಿ ಯಾವುದೇ ಸ್ವಾರ್ಥ ಇಲ್ಲ ಎಂದು ಶಾಸಕ ಎಚ್.ಕೆ. ಸುರೇಶ್ ಹೇಳಿದರು.
ತಾಲೂಕು ಬ್ರಾಹ್ಮಣ ಮಹಾಸಭಾ ಚಾರಿಟಬಲ್ ಟ್ರಸ್ಟ್ ಹಾಗೂ ವಿಪ್ರ ಮಹಿಳಾ ಒಕ್ಕೂಟದ ಸಹಯೋಗದೊಂದಿಗೆ ಶ್ರೀ ಚನ್ನಕೇಶವಸ್ವಾಮಿಗೆ ಮಹಾಭಿಷೇಕ ನೆರವೇರಿಸಿದ ನಂತರ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾನೂ ಸಹ ವೈಕುಂಠ ಬೀದಿಯಲ್ಲೇ ವಾಸವಿದ್ದು ಉತ್ತಮ ಕಾಮಗಾರಿ ಮಾಡಿಸುತ್ತಿದ್ದೇನೆ. ಇದನ್ನು ಸಹಿಸದ ಪ್ರತಿಪಕ್ಷದವರು ಆಕ್ಷೇಪಣೆ ವ್ಯಕ್ತ ಪಡಿಸುತ್ತಿದ್ದಾರೆ. ಆದರೆ ದೇಗುಲದ ಸುತ್ತಲಿನ ಎಂಟು ಬೀದಿಗಳಲ್ಲಿ ಒಂದಾಗಿರುವ ವೈಕುಂಠ ಬೀದಿಯಲ್ಲಿ ಚನ್ನಕೇಶವಸ್ವಾಮಿ ದೇವರ ವಿವಿಧ ಉತ್ಸವಗಳು ಸಾಗುತ್ತದೆ. ಆದರೆ ಹಲವಾರು ವರ್ಷಗಳಿಂದ ಈ ಬೀದಿಯ ರಸ್ತೆ, ಚರಂಡಿ ಅಭಿವೃದ್ಧಿ ಆಗಿರಲಿಲ್ಲ. ಅಲ್ಲದೆ ನಾನು ಹಾಸನ ಜಿಲ್ಲೆಯ ದುದ್ದ ಹೋಬಳಿಗೆ ಸೇರಿದವನಾಗಿದ್ದು ಕಾಕತಾಳೀಯವೆಬಂತೆ ಚನ್ನಕೇಶವಸ್ವಾಮಿಯ ಬಲಭಾಗದ ವೈಕುಂಠ ಬೀದಿಯಲ್ಲಿ ನನಗೆ ಮನೆ ಸಿಕ್ಕಿದೆ. ಆದ್ದರಿಂದ ವೈಕುಂಠ ಬೀದಿ ಸುಂದರವಾಗಿ ಕಾಣಬೇಕು ಹಾಗೂ ಪ್ರವಾಸಿಗರ ಮನ ಸೆಳೆಯುವಂತಹ ನಿಟ್ಟಿನಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆಯೇ ಹೊರತು, ಯಾವುದೇ ರಾಜಕೀಯದ ದುರುದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.
ತಾಲೂಕು ಬ್ರಾಹ್ಮಣ ಮಹಾಸಭಾ ಚಾರಿಟಬಲ್ ಟ್ರಸ್ಟ್ ಸಮುದಾಯ ಭವನ ನಿರ್ಮಾಣಕ್ಕೆ ಸಿಎ ಸೈಟ್ ಗೆ ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಜಾಗ ಗುರುತಿಸಿದರೆ ಸರ್ಕಾರದ ಅನುದಾನ ಹಾಗೂ ನನ್ನ ಕೈಲಾದಷ್ಟು ಸಹಾಯವನ್ನು ನೀಡಿ ಉತ್ತಮ ಭವನ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೆಲಗೂರು ಕ್ಷೇತ್ರದ ಶ್ರೀ ವಿಜಯ ಮಾರುತಿ ಶರ್ಮ ಸ್ವಾಮೀಜಿ ಆಶೀರ್ವಚನ ನೀಡಿದರು. ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮಾಜಿ ನಿರ್ದೇಶಕ ರಾಘವೇಂದ್ರ ಭಟ್, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಿ.ಆರ್.ವಿ. ಜಯಕೇಶವ, ಸಮಾಜ ಸೇವಕ ನರಸಿಂಹಮೂರ್ತಿ, ಬ್ರಾಹ್ಮಣ ಸಮಾಜದ ಮಂಜುನಾಥ ಮೂರ್ತಿ, ಆನಂಬಿ ರಮೇಶ್, ರಾಧಾ, ವೇಣುಗೋಪಾಲ್ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net